

ಶಶಿಧರ ಪಾಟೀಲ ಕೋ.ಶಿವಾಪುರ
ಸವದತ್ತಿ ತಾಲೂಕಿನ ಹಿರೇಬೂದನೂರ ಗ್ರಾಮದ ಭಕ್ತರ ಪಾಲಿನ ಪೂಜ್ಯನಿಯ ಸಿದ್ದಗಡಾದ ವಿಠ್ಠಪ್ಪ ದೇವರ ಜಾತ್ರಾ ಮಹೋತ್ಸವವು ೆ.27 ಹಾಗೂ 28ರಂದು ಜರುಗಲಿದೆ.
ಹಿರೇಬೂದನೂರ ಗ್ರಾಮದ ಹಲವು ದೇವರ ಸಮೂಹ: ಹಿರೇಬೂದನೂರ ಗ್ರಾಮದ ಗುಡ್ಡ ಪ್ರದೇಶದಲ್ಲಿ ಕರೆಮ್ಮ ದೇವರು, ಶಿವ&ಪಾರ್ವತಿ, ಲಕ್ಷಿ$್ಮ ದೇವರು ಹಾಗೂ ರೇಣುಕಾ ಯಲ್ಲಮ್ಮ ನೆಲೆಸಿದ್ದಾರೆ. ಇಲ್ಲಿನ ವಿಠ್ಠಪ್ಪ ದೇವರ ದೇವಸ್ಥಾನಕ್ಕೆ ಪ್ರತಿ ಭಾನುವಾರ ಮತ್ತು ಅಮಾವಾಸ್ಯೆ, ಹುಣ್ಣಿಮೆ ದಿನಗಳಂದು ಅಪಾರ ಭಕ್ತರು ಆಗಮಿಸಿ ದರ್ಶನ ಪಡೆಯುತ್ತಾರೆ.
ಬಂಜೆತನ ಸಮಸ್ಯೆಯುಳ್ಳ ದಂಪತಿ ಭಕ್ತಿಯಿಂದ ಪ್ರಾರ್ಥಿಸಿದರೆ ಸಂತಾನ ಭಾಗ್ಯ ಪ್ರಾಪ್ತಿಯಾಗುವುದು ಎಂದು ಭಕ್ತರ ನಂಬುತ್ತಾರೆ. ಪ್ರತಿವರ್ಷ ಮಹಾಶಿವರಾತ್ರಿ, ಶೀಗಿ ಹುಣ್ಣಿಮೆಗೆ ದೇವರ ಜಾತ್ರೆ ನೆರವೇರುತ್ತದೆ.
ಸಿದ್ದಗಡಾದ ವಿಠ್ಠಪ್ಪ ದೇವರ ಪವಾಡ: ನಾಲ್ಕಾರು ಯುವಕರ ದಂಡು ಕಾಡಿನತ್ತ ಅಲೆಯುತ್ತ ಬರುತ್ತದೆ. ಆಗ ಹಸಿವು ತಾಳಲಾಗದೆ ವಿಠ್ಠಪ್ಪ ದೇವಸ್ಥಾನಕ್ಕೆ ಬಂದು ಬೇಡಿಕೊಂಡಾಗ ಯುಕರಿಗೆ ದೇವವಾಣಿಯು ದೇವಸ್ಥಾನದ ಎದುರಿನ ಕಲ್ಲೆತ್ತುವಂತೆ ತಿಳಿಸುತ್ತದೆ. ಆಗ ಅವರಿಗೆ ಬೇಕಾದ ಸಜ್ಜಿ ರೊಟ್ಟಿ, ಮೊಸರು ಹಾಗೂ ಪಂಚಾಮತ ಅಡುಗೆ ದೊರೆಯುತ್ತದೆ ಎಂದು ನಂಬಲಾಗಿದೆ.
ಕಾರ್ಯಕ್ರಮಗಳ ವಿವರ: ವಿಠ್ಠಪ್ಪ ದೇವರ ಜಾತ್ರೆ ೆ. 27ರಂದು ಆರಂಭವಾಗುತ್ತದೆ. ಬೆಳಗ್ಗೆ ದೇವರಿಗೆ ಅಭಿಷೇಕ, ನೆವೇದ್ಯ, ಡೊಳ್ಳಿನ ವಾಲಗ, ರಾತ್ರಿ 9.30ಕ್ಕೆ ಸಾಮಾಜಿಕ ನಾಟಕ, ಮಹಾಪ್ರಸಾದ ಜರುಗುತ್ತದೆ. 28ರಂದು ಪಲ್ಲಕ್ಕಿ ಉತ್ಸವ, ಭಂಡಾರ ಒಡೆಯುವುದರ ಮೂಲಕ ಜಾತ್ರೆ ಸಂಪನ್ನಗೊಳ್ಳುವುದು.
'ಹಿರೇಬೂದನೂರ ವಿಠ್ಠಪ್ಪ ದೇವಸ್ಥಾನ ಸುತ್ತಮುತ್ತಲಿನ ಗ್ರಾಮಗಳಲ್ಲಿ ತುಂಬಾ ಪ್ರಸಿದ್ಧ. ಭಕ್ತರು ದೇವರ ದರ್ಶನ ಪಡೆದು ಇಷ್ಟಾರ್ಥಗಳನ್ನು ಸಲ್ಲಿಸುತ್ತಾರೆ. ಮಹಾಶಿವರಾತ್ರಿ ಜಾತ್ರೆ ಅದ್ದೂರಿಯಾಗಿ ನಡೆಯುತ್ತದೆ.'
> ಸದಾನಂದ ಆಳಾಜ ಪಡಿತರ ಚೀಟಿ ಆಹಾರ ವಿತರಕ ಹಿರೇಬೂದನೂರ
'ಸಿದ್ದಗಡಾದ ವಿಠ್ಠಪ್ಪ ದೇವರಿಗೆ ನಂಬಿಕೆಯಿಂದ ನಡೆದುಕೊಂಡರೆ ಭಕ್ತರ ಹಲವು ಸಂಕಷ್ಟ ಪರಿಹರಿಸಿ, ನಮ್ಮನ್ನು ಸನ್ಮಾರ್ಗದಲ್ಲಿ ಮುನ್ನಡೆಸುತ್ತಾರೆ.'
> ಲಕ್ಷ$್ಮಪ್ಪ ತಿರ್ಲಾಪುರ ದೇವಸ್ಥಾನದ ಪೂಜಾರ