ಸಿz್ದÉÃಶ್ವರ ಸ್ವಾಮೀಜಿ ಜೀವನ ಎಲ್ಲರಿಗೂ ಮಾದರಿ

Published on

ನಗರಸಭೆ ಸದಸ್ಯ ಚನ್ನೂರ ಹೇಳಿಕೆ | ಸಿz್ಶ್ವರ ಗ್ರಾಮೀಣಾಭಿವೃದ್ಧಿ ಸಂಸ್ಥೆ ಉದ್ಘಾಟನೆ

ವಿಜಯವಾಣಿ ಸುದ್ದಿಜಾಲ ಶಹಾಪುರ

ಸಿz್ದÉÃಶ್ವರ ಸ್ವಾಮೀಜಿ ಎಂದರೆ ನಡೆದಾಡುವ ದೇವರೆಂದೆ ಗುರುತಿಸಿಕೊಂಡವರು. ಆದರೆ ಅವರ ನಡೆ ತುಂಬಾ ಭಿನ್ನವಾಗಿತ್ತು ಎಂದು ನಗರಸಭೆ ಸದಸ್ಯ ಬಸವರಾಜ ಚನ್ನೂರ ಹೇಳಿದರು.

ನಗರದ ಹಳಿಸಗರ ಭಾಗದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಸಿz್ದÉÃಶ್ವರ ಸ್ವಾಮೀಜಿ ಸಾಂಸ್ಕೃತಿಕ ಮತ್ತು ಗ್ರಾಮೀಣಾಭಿವೃದ್ಧಿ ಶಿಕ್ಷಣ ಸಂಸ್ಥೆ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಿz್ದÉÃಶ್ವರ ಸ್ವಾಮೀಜಿ ಅವರು ಎಂದೂ ಹಣ, ಅಧಿಕಾರಕ್ಕಾಗಿ ಆಸೆಪಟ್ಟವರಲ್ಲ. ಅಂತಹ ಮಹಾನ್ ಸಂತರ ನಡೆ-ನುಡಿ, ಆಚಾರ-ವಿಚಾರಗಳನ್ನು ಕಂಡು ಕೇಳಿ ಬೆಳೆದ ನಾವುಗಳೇ ಧನ್ಯರು ಎಂದರು.

ಅವರ ಸರಳ ನಡೆ ನುಡಿ ಮೂಲಕ ಜಗತ್ತಿನಾದ್ಯಂತ ಪ್ರವಚನದಿಂದ ಖ್ಯಾತನಾಮರಾಗಿದ್ದರು. ಜ್ಞಾನಯೋಗಾಶ್ರಮಕ್ಕೆ ಸರ್ಕಾರ ಅನುದಾನ ಘೋಷಣೆ ಮಾಡಿದರೂ ಕೂಡ ಮಠಕ್ಕೆ ಅದರ ಅಗತ್ಯವಿಲ್ಲ ಎಂದು ತಿರಸ್ಕರಿಸಿ ಮಹಾತ್ಮ ಆಗಿದ್ದಾರೆ. ಹೀಗಾಗಿ ಅವರ ಜೀವನ ಎಲ್ಲರಿಗೂ ಮಾದರಿಯಾಗಿದೆ ಎಂದರು.

ಪತ್ರಕರ್ತರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಮುದ್ನೂರ ಪ್ರಾಸ್ತವಿಕವಾಗಿ ಮಾತನಾಡಿದರು. ಇದೆ ವೇಳೆ ಸುಮಾರು ೫೫೦ ವಿದ್ಯಾರ್ಥಿಗಳಿಗೆ ಸಂಸ್ಥೆಯಿAದ ನೋಟ್ ಬುಕ್ ವಿತರಿಸಲಾಯಿತು. ಮುಖಂಡ ಲಿಯಾಖತ್ ಪಾಶಾ ಕಾರ್ಯಕ್ರಮ ಉದ್ಘಾಟಿಸಿದರು. ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಸಿದ್ದು ಸಾಹು ಆರಬೋಳ ಅಧ್ಯಕ್ಷತೆ ವಹಿಸಿದ್ದರು. ನಗರಸಭೆ ಸದಸ್ಯರಾದ ಸತೀಶ ಪಂಚಭಾವಿ, ಶಾಂತಪ್ಪ ಕಟ್ಟಿಮನಿ, ಪತ್ರಕರ್ತ ಮಲ್ಲಿಕಾರ್ಜುನ ಮಳಿಕೇರಿ, ಭೀನಗೌಡ ಪೊಲೀಸ್ ಪಾಟೀಲ್, ಸುಭಾಷ ಹೋತಪೇಠ, ಶಿವಕುಮಾರ ಶಿರವಾಳ, ಮರೆಪ್ಪ ಮುಂಡಾಸ, ಸಿದ್ದು ಮುಂಡಾಸ, ಸಂಸ್ಥೆ ಅಧ್ಯಕ್ಷೆ ಶೈಲಾ ಪ್ರದೀಪ ಅಣಬಿ, ಮುಖ್ಯಗುರು ರಾಜಣ್ಣ ಗೊಟೂರ ಇತರರಿದ್ದರು. ಹಾಸ್ಯ ಕಲಾವಿದ ಸುನೀಲ್ ಶಿರ್ಣಿ ಮಿಮಿಕ್ರಿ ಮೂಲಕ ಮಕ್ಕಳನ್ನು ರಂಜಿಸಿದರು.

----

ಕೋಟ್

ಸಿz್ದÉÃಶ್ವರ ಸ್ವಾಮೀಜಿ ತಮ್ಮ ನಡೆ-ನುಡಿ ಮತ್ತು ಪ್ರವಚನದಿಂದ ಭಕ್ತರ ಗಮನ ಸೆಳೆದಿದ್ದರು. ಅವರ ತೊಡುವ ಬಟ್ಟೆಗೆ ಪಾಕೆಟ್(ಕಿಸೆ) ಇರಲಿಲ್ಲ. ಅವರೆಂದು ಹಣ, ಆಸ್ತಿಗೆ ಆಸೆ ಪಟ್ಟವರಲ್ಲ. ಅಲ್ಲದೆ ಲಿಂಗೈಕ್ಯರಾಗುವ ಮುನ್ನವೇ ಅವರು ತಮ್ಮ ಅಂತ್ಯಕ್ರಿಯೆ ಹೇಗೆ ಮಾಡಬೇಕು ಎಂಬುದು ಸಹ ಬರೆದಿಟ್ಟ ಮಹಾನ್ ಸಂತ.

| ಸಿದ್ದು ಆರಬೋಳ

ಅಧ್ಯಕ್ಷರು, ನಗರಯೋಜನಾ ಪ್ರಾಧಿಕಾರ ಶಹಾಪುರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net