

ಬೆಳಗಾವಿ: ಬಾದಾಮಿ ಜಿಲ್ಲಾ ಪ್ರವಾಸಕ್ಕೆಂದು ಬೆಂಗಳೂರಿನಿಂದ ಇಲ್ಲಿನ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಬಂದಿಳಿದ ಮಾಜಿ ಸಿಎಂ ಸಿದ್ದರಾಮಯ್ಯ, ಇನ್ಸುಲಿನ್ಗಾಗಿ ಏಪೋರ್ಟ್ನಲ್ಲೇ ಒಂದು ಗಂಟೆಗೂ ಅಧಿಕ ಕಾಲ ಕಾದು ಕಾದು ಸುಸ್ತಾದ ಘಟನೆ ಸೋಮವಾರ ಬೆಳಗ್ಗೆ ಸಂಭವಿಸಿದೆ.
ಸಿದ್ದರಾಮಯ್ಯ ರೆಗ್ಯೂಲರ್ ಆಗಿ ತೆಗೆದುಕೊಳ್ಳುವ ಇನ್ಸುಲಿನ್ ಇಂಜೆಕ್ಷನ್ ಅನ್ನು ಮರೆತು ಬೆಂಗಳೂರಿಂದ ಬೆಳಗಾವಿ ವಿಮಾನ ನಿಲ್ದಾಣಕ್ಕೆ ಬಂದಿದ್ದರು. ಅಲ್ಲಿಯೇ ಉಪಹಾರ ಸೇವಿಸಿದ ಸಿದ್ದರಾಮಯ್ಯ, ಇನ್ಸುಲಿನ್ ಕೊಡುವಂತೆ ತನ್ನ ಸಹಾಯಕರನ್ನು ಕೇಳಿದರು. ಈ ವೇಳೆ ಇನ್ಸುಲಿನ್ ಇಲ್ಲ ಎಂಬುದು ಗೊತ್ತಾಗಿದೆ. ಹಾಗಾಗಿ ಅವರು ಒಂದು ತಾಸು ಅಲ್ಲೇ ಕುಳಿತಿದ್ದರು.
ಕೂಡಲೇ ಮಾಜಿ ಶಾಸಕ ಅಶೋಕ ಪಟ್ಟಣ, ತನ್ನ ಕಾರು ಚಾಲಕನನ್ನು ಬೆಳಗಾವಿ ಪಟ್ಟಣಕ್ಕೆ ಕಳುಹಿಸಿ ಇನ್ಸುಲಿನ್ ತರಿಸಿ ಕೊಟ್ಟರು.
ಈ ವೇಳೆ ಮಾತನಾಡಿದ ಅಶೋಕ ಪಟ್ಟಣ, ಸಿದ್ದರಾಮಯ್ಯ ಚೆನ್ನಾಗಿದ್ದಾರೆ. ಅವರು ಹೊರಗಡೆ ಬಂದಾಗ ಬೇಕಾದ್ರೆ ಕುಸ್ತಿ ಹಿಡಿರಿ, ಅವರು ಮೈಸೂರು ಪೈಲ್ವಾನ್ ಎಂದು ತಮಾಷೆ ಮಾಡಿದರು.