'ಗೋ ಮಾಂಸ ತಿನ್ನುವ ಸಿದ್ದರಾಮಯ್ಯಗೆ ಮೊದಲು ಶಿಕ್ಷೆಯಾಗಬೇಕು' ಜಗದೀಶ್ ಶೆಟ್ಟರ್ ಹೇಳಿಕೆ

shettar
Published on

ಬಳ್ಳಾರಿ: ಗೋ ಮಾಂಸ ನಿಷೇಧ ಕಾಯ್ದೆಯ ಬಗ್ಗೆ ನಕಾರ ಎತ್ತಿರುವ ಸಿದ್ದರಾಮಯ್ಯ ವಿರುದ್ಧ ಸಚಿವ ಜಗದೀಶ್ ಶೆಟ್ಟರ್ ಆರೋಪ ವ್ಯಕ್ತಪಡಿಸಿದ್ದಾರೆ. ಬುಧವಾರದಂದು ಹೊಸಪೇಟೆಯಲ್ಲಿ ನಡೆದ ಜನಸೇವಕ ಸಮಾವೇಶದಲ್ಲಿ ಮಾತನಾಡಿದ ಅವರು ಮೊದಲು ಸಿದ್ದರಾಮಯ್ಯಗೆ ಶಿಕ್ಷೆಯಾಗಬೇಕು ಎಂದು ಹೇಳಿದ್ದಾರೆ.

ಸಿದ್ದರಾಮಯ್ಯ ಗೋಕಾಯ್ದೆ ವಿರೋಧ ಮಾಡೋ ವಿಷಯ ಬೇರೆ ಆದರೆ ಗೋ ಮಾಂಸವನ್ನು ತಿನ್ನುತ್ತೇವೆ ಎಂದು ಹೇಳಿಕೆ ಕೊಡುವುದು ಬೇರೆಯದ್ದೇ ವಿಚಾರ. ಈ ರೀತಿ ಹೇಳಿಕೆ ಕೊಡಲು ಅವರಿಗೆ ನಾಚಿಕೆ ಆಗುವುದಿಲ್ಲವೇ? ಗೋಮ ಹತ್ಯೆ ಮಾಡುವವರಿಗಲ್ಲ ಮೊದಲು ತಿನ್ನುವವರಿಗೆ ಶಿಕ್ಷೆಯಾಗಬೇಕು. ಆ ರೀತಿಯಲ್ಲಿ ಮೊದಲು ಸಿದ್ದರಾಮಯ್ಯಗೆ ಶಿಕ್ಷೆಯಾಗಬೇಕು ಎಂದು ಅವರು ದೂರಿದ್ದಾರೆ.

ಕಾಂಗ್ರೆಸ್ ಸಂಕಲ್ಪ ಯಾತ್ರೆಯನ್ನು ಬಗ್ಗೆ ಮಾತನಾಡಿದ ಶೆಟ್ಟರ್​, "ಅದು ಸಂಕಲ್ಪ ಯಾತ್ರೆಯಲ್ಲ, ಅಂತಿಮ ಯಾತ್ರೆ. ಕಾಂಗ್ರೆಸ್ ಯಾವಾಗಲೂ ಕುಟುಂಬ ರಾಜಕೀಯವನ್ನೇ ಮಾಡಿಕೊಂಡು ಬಂದಿದೆ. ಗಾಂಧಿ ಕುಟುಂಬಕ್ಕೆ ಮಾತ್ರವೇ ಸೀಮಿತವಾಗಿದೆ." ಎಂದು ಲೇವಡಿ ಮಾಡಿದರು.

"18 ಕೋಟಿ ಕಾರ್ಯಕರ್ತರು ಇರುವ ದೊಡ್ಡ ಪಕ್ಷ ಬಿಜೆಪಿ. ಬೆಂಗಳೂರಿಗೆ ಸೀಮಿತವಾದ ಇಂಡಸ್ಟ್ರಿಗಳನ್ನು ಇಡೀ ರಾಜ್ಯಕ್ಕೆ ವಿಸ್ತರಣೆ ಮಾಡುವ ಕೆಲಸವನ್ನು ನಾವು ಮಾಡುತ್ತಿದ್ದೇವೆ. 2023ರಲ್ಲಿ ಅಖಂಡ ಬಳ್ಳಾರಿ ಜಿಲ್ಲೆಯಲ್ಲಿ ಹತ್ತು ‌ಕ್ಷೇತ್ರ ಗೆಲ್ಲುತ್ತೇವೆ. ವಿಜಯನಗರ ಜಿಲ್ಲೆ ಈಗಾಗಲೇ ಘೋಷಣೆಯಾಗಿದೆ ಇದನ್ನು ಶೀಘ್ರದಲ್ಲೇ ಅನುಷ್ಠಾನಕ್ಕೆ ತರುತ್ತೇವೆ." ಎಂದು ಹೇಳಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net