

ಮೈಸೂರು: ಸಿದ್ದರಾಮಯ್ಯರೇ ಮುಂದಿನ ಸಿಎಂ ಎಂಬ ಕೂಗು ಶಾಸಕ ಜಮೀರ್ ಅಹ್ಮದ್ರ ಬಾಯಲ್ಲಿ ಮತ್ತೊಮ್ಮೆ ಹೊರಹೊಮ್ಮಿದೆ.
ಹುಣಸೂರಿನಲ್ಲಿ ಶುಕ್ರವಾರ ಕಾಂಗ್ರೆಸ್ ಜನಾಧಿಕಾರ ಸಮಾವೇಶದಲ್ಲಿ ಭಾಷಣ ಆರಂಭಿಸುತ್ತಲೇ ಜಮೀರ್, ಸಿದ್ದರಾಮಯ್ಯ ಅವರನ್ನು 'ಭಾವಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ' ಎಂದರು. 'ಸಿದ್ದರಾಮಯ್ಯ ಅವರನ್ನು ಮಾಜಿ ಮುಖ್ಯಮಂತ್ರಿ ಎಂದು ಹೇಳೋಕೆ ಮನಸಾಗುತ್ತಿಲ್ಲ. ಹೀಗಾಗಿ ಅವರನ್ನು ಭಾವಿ ಮುಖ್ಯಮಂತ್ರಿ ಸಿದ್ದರಾಮಯ್ಯ ಎನ್ನುತ್ತೇನೆ' ಎಂದರು. ಇದನ್ನೂ ಓದಿರಿ ರಾಮ ಮಂದಿರವಲ್ಲ, ಅದು ಆರ್ಎಸ್ಎಸ್ ಮಂದಿರ: ವಿವಾದದ ಕಿಡಿ ಹೊತ್ತಿಸಿದ ಪಿಎಫ್ಐ ಮುಖಂಡ