ಸಿದ್ದರಾಮಯ್ಯ ಮೇಲೆ ಬೀಳಲಿದ್ದ ಬೃಹತ್​ ಗಾತ್ರದ ಹಾರ! ಜಸ್ಟ್ ಮಿಸ್ಡ್!!

school (1)
Published on

ಕೋಲಾರ: ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಅವರು ಇಂದು ಇಡೀ ದಿನ ಕೋಲಾರದ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿದರು. ಮುಂಬರುವ ಅಸೆಂಬ್ಲಿ ಚುನಾವಣೆಯಲ್ಲಿ ಕೋಲಾರದಿಂದ ಸ್ಪರ್ಧಿಸಬಹುದೇ ಎಂಬುದನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಜನರ ನಾಡಿಮಿಡಿತ ಅರಿಯಲು ಬಂದಿದ್ದ ಸಿದ್ದರಾಮಯ್ಯ ಅವರಿಗೆ ಜನ ಭರ್ಜರಿ ಸ್ವಾಗತವನ್ನೇ ನೀಡಿದರು.

ಇಂದು ಭೇಟಿ ನೀಡಿದಾಗ ಮುಸ್ಲಿಂ ಮುಖಂಡರು ಬೃಹತ್ ಗಾತ್ರದ ಹಾರ ಹಾಕುತ್ತಿದ್ದ ವೇಳೆಯಲ್ಲಿ ಕ್ರೇನ್​ ನಿಂದ ಹಾರ ಸಿದ್ದರಾಮಯ್ಯರ ಪಕ್ಕದಲ್ಲಿ ಬಿತ್ತು, ಅವರ ಮೇಲೆಯೇ ಬೀಳುವುದು ಕೂದಲೆಳೆ ಅಂತರದಲ್ಲಿ ತಪ್ಪಿತು. ಇದರಿಂದ ಅಭಿಮಾನಿಗಳು ಕೆಲವು ಕ್ಷಣಗಳ ಕಾಲ ಗಾಬರಿಗೊಂಡರು.

ಬಳಿಕ, ಶ್ರೀ ಬೈರವೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ಸಿದ್ದರಾಮಯ್ಯ ನಂತರ ಮುಖಂಡರು ಕಾರ್ಯಕರ್ತರೊಂದಿಗೆ ಊಟ ಮಾಡಿದರು. ಕೋಲಾರದಿಂದ ಸ್ಪರ್ಧೆ ಮಾಡಬೇಕೆಂದು ಅಭಿಮಾನಿಗಳು ಒತ್ತಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net