ಸಿದ್ದು ಸಿಎಂ ಪ್ರಮಾಣ, ತುಮಕೂರಲ್ಲಿ ಸಂಭ್ರಮ

Siddu_CM
Published on

ತುಮಕೂರು: ರಾಜ್ಯದ 24ನೇ ಹಾಗೂ 2ನೇ ಬಾರಿ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಪ್ರಮಾಣ ವಚನ ಸ್ವೀಕರಿಸಿದ ಸಂದರ್ಭದಲ್ಲಿ ನಗರದಲ್ಲಿ ಸಂಭ್ರಮಾಚರಿಸಲಾಯಿತು.

ಶ್ರೀ ಕನಕ ಶ್ರೀ ಸೇವಾ ಸಮಿತಿಯಲ್ಲಿ ನಗರದ ಟೌನ್‌ಹಾಲ್ ವೃತ್ತದಲ್ಲಿ ಎಲ್‌ಇಡಿ ಪರದೆ ಅಳವಡಿಸಿ ಸಿದ್ದು ಪ್ರಮಾಣ ಸ್ವೀಕರಿಸಿದ್ದನ್ನು ಕಣ್ತುಂಬಿಕೊಂಡು ಸಡಗರಪಟ್ಟರೆ, ನಗರದ ಹೊರವಲಯದ ಲಿಂಗಾಪುರ ವೃತ್ತದಲ್ಲಿ ರೇವಣಸಿದ್ದೇಶ್ವರ ಮಠದ ಬಿಂದುಶೇಖರ್ ಒಡೆಯರ್ ನೇತೃತ್ವದಲ್ಲಿ ಅನ್ನಸಂತರ್ಪಣೆ ನೆರವೇರಿಸಲಾಯಿತು.

ಶನಿವಾರ ಮಧ್ಯಾಹ್ನ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿ, ಡಿ.ಕೆ.ಶಿವಕುಮಾರ್ ಉಪಮುಖ್ಯಮಂತ್ರಿ, ಡಾ.ಜಿ.ಪರಮೇಶ್ವರ್ ಸೇರಿದಂತೆ 8 ಮಂದಿ ಕ್ಯಾಬಿನೆಟ್ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮಾರಂಭವನ್ನು ದೊಡ್ಡ ಪರದೆ ಅಳವಡಿಸಿ ವೀಕ್ಷಣೆಗೆ ಅವಕಾಶವನ್ನು ಶ್ರೀ ಕನಕ ಶ್ರೀ ಸೇವಾ ಸಮಿತಿಯ ಟಿ.ಎನ್.ಮಧುಕರ್ ನೇತೃತ್ವದಲ್ಲಿ ಕಲ್ಪಿಸಲಾಗಿತ್ತು. ಟೌನ್‌ಹಾಲ್ ವೃತ್ತದಲ್ಲಿ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಾಚರಿಸಲಾಯಿತು.

ಜಿಲ್ಲಾ ಕುರುಬ ಸಂಘದ ಅಧ್ಯಕ್ಷ ಟಿ.ಆರ್.ಸುರೇಶ್, ಕವಿರತ್ನ ಕಾಳಿದಾಸ್ ಬ್ಯಾಂಕ್ ಅಧ್ಯಕ್ಷ ಧರ್ಮರಾಜ್, ಅನಿಲ್‌ಕುಮಾರ್, ವಿ.ಆರ್.ವೆಂಕಟೇಶ್, ಮಹದೇವು, ಮಾಜಿ ಕಾರ್ಪೋರೇಟರ್ ಎನ್.ಮಹೇಶ್, ಇಂದ್ರಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

ಅನ್ನಸಂತರ್ಪಣೆ: ರಾಜ್ಯದ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರು ಪ್ರಮಾಣ ವಚನ ಸ್ವೀಕರಿಸಿದ ಸಂದರ್ಭದಲ್ಲಿ ತುಮಕೂರಿನ ಹೊರವಲಯದ ಲಿಂಗಾಪುರ ವೃತ್ತದಲ್ಲಿ ಸಿದ್ದರಾಮಯ್ಯ ಬೃಹತ್ ಕಟೌಟ್ ಮುಂದೆ ಅಭಿಮಾನಿಗಳು ವಿಜಯೋತ್ಸವ ಆಚರಿಸಿದರು. ಈ ಸಂದರ್ಭದಲ್ಲಿ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.

ರೇವಣಸಿದ್ದೇಶ್ವರ ಮಠದ ಬಿಂದುಶೇಖರ್ ಒಡೆಯರ್, ನಗರ ಪಾಲಿಕೆ ಮಾಜಿ ಸದಸ್ಯ ಟಿ.ಜಿ.ಮಂಜುನಾಥ್, ಮುಖಂಡರಾದ ಚಂದ್ರಶೇಖರ್, ಗುರುಪ್ರಸಾದ್, ವಿಜಯ್, ಜಗದೀಶ್, ಚೆಲುವರಾಜು, ಆದಿಲ್, ರಂಗನಾಥ್, ಶ್ರೀನಿವಾಸ್, ಹನುಮಂತರಾಜು, ರಮೇಶ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net