ಸಿದ್ದರಾಮಯ್ಯನನ್ನು ಸಿಎಂ ಸ್ಥಾನದಿಂದ ಇಳಿಸಲು ಸಾಧ್ಯವಿಲ್ಲ

cm
Published on

ರಾಮನಗರ: ರಾಜ್ಯದಲ್ಲಿ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಬದಲಿಸುವುದು ಅಷ್ಟು ಸುಲಭವಲ್ಲ, ಸದ್ಯ ಯಾವ ಪಕ್ಷದಲ್ಲಿಯೂ ಅವರಷ್ಟು ಮುತ್ಸದ್ದಿ ರಾಜಕಾರಣಿ ಇಲ್ಲ, ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಇಳಿಸಬೇಕಾದರೆ ಒಂದು ಕ್ರಾಂತಿಯೇ ಆಗಬೇಕು ಎಂದು ಹಿರಿಯ ಕನ್ನಡಪರ ಹೋರಾಟಗಾರ ವಾಟಾಳ್​ ನಾಗರಾಜ್​ ಹೇಳಿದರು.

ರಾಮನಗರದ ಐಜೂರು ವೃತ್ತದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿ ಸುದ್ದಿಗಾರರೊಂದಿಗೆ ಮಾತನಾಡಿ, ಕೆಲವರು ಸಿಎಂ ಸ್ಥಾನದಿಂದ ಸಿದ್ದರಾಮಯ್ಯ ಅವರನ್ನು ಇಳಿಸಬೇಕು ಎಂದು ಆಗ್ರಹಪಡಿಸುತ್ತಿದ್ದಾರೆ, ಅದು ಸಾಧ್ಯವಾಗದ ಮಾತು ಎಂದರು.

ಪೊಲೀಸರು ಈಗ ಧರಿಸುತ್ತಿರುವ ಟೋಪಿ ದ್ವಿಚಕ್ರ ವಾಹನ ಚಲಾವಣೆಯಲ್ಲಿ ಹಾಕುವ ಹೆಲ್ಮೆಟ್​ನಷ್ಟೇ ಭಾರ ಹೊಂದಿದೆ, ಇದರಿಂದ ಪೊಲೀಸರಿಗೆ ಮಿದುಳಿಗೆ ಸಂಬಂಧಿಸಿದ ಕಾಯಿಲೆಗಳು ಬರುತ್ತಿವೆ. ಹಾಗಾಗಿ ಈಗಿರುವ ಟೋಪಿಯನ್ನು ಬದಲಿಸಿ ಸುಧಾರಿತ ಟೋಪಿ ನೀಡಬೇಕು ಎಂದರು.

ಪೊಲೀಸರ ವರ್ಗಾವಣೆ ವಿಚಾರದಲ್ಲಿಯೂ ಸರ್ಕಾರ ಅವರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ವರ್ಗಾವಣೆ ಮಾಡಬೇಕು, ಹತ್ತಾರು ವರ್ಷ ವರ್ಗಾವಣೆ ಮಾಡದೆ ಒಂದೇ ಠಾಣೆಯಲ್ಲಿ ಇರುವ ಮಂದಿ ಇದ್ದಾರೆ, ಅವರು ದೂರದ ತಮ್ಮ ಕುಟುಂಬಗಳನ್ನು ಭೇಟಿ ಮಾಡಲು ಆಗದಂತಹ ಪರಿಸ್ಥಿತಿ ಇದೆ, ಇದು ಸರಿಯಲ್ಲ, ಐದು ವರ್ಷ ಸೇವೆ ಸಲ್ಲಿಸಿದ ನಂತರ ಅವರನ್ನು ಅವರ ತವರು ಜಿಲ್ಲೆಗೆ ವರ್ಗಾವಣೆ ಮಾಡಬೇಕು ಎಂದು ಆಗ್ರಹಿಸಿದರು.

ಹಿಂದಿ ಭಾಷೆ ಹೇರಿಕೆಗೆ ರಾಜ್ಯದಲ್ಲಿ ಸರ್ಕಾರ ಅವಕಾಶ ಕೊಡಬಾರದು, ಕರ್ನಾಟಕದಲ್ಲಿ ಕನ್ನಡಿಗರಿಗೇ ಉದ್ಯೋಗಾವಕಾಶ ಸಿಗುವಂತೆ ನೋಡಿಕೊಳ್ಳಬೇಕು. ನೆರೆಯ ಮಹಾರಾಷ್ಟ್ರ ಸರ್ಕಾರ ಮರಾಠಿ ಭಾಷೆಗೆ ಆದ್ಯತೆ ನೀಡಿ ಹಿಂದಿ ಭಾಷೆಯನ್ನು ಹೇರಲು ಹಿಂದೇಟು ಹಾಕಿದೆ, ನಮ್ಮ ರಾಜ್ಯದಲ್ಲಿಯೂ ಹಿಂದಿ ಹೇರಿಕೆಗೆ ಅವಕಾಶ ಕೊಡಬಾರದು ಎಂದು ಒತ್ತಾಯಿಸಿದರು.

ಕರುನಾಡ ಸೇನೆ ರಾಜ್ಯ ಉಪಾಧ್ಯಕ್ಷ ಐಜೂರು ಎಂ. ಜಗದೀಶ್​, ಜಿಲ್ಲಾಧ್ಯಕ್ಷ ಸಿ.ಎಸ್​ ಜಯಕುಮಾರ್​, ತಾಲೂಕು ಅಧ್ಯಕ್ಷ ವಿ.ಎನ್​. ಗಂಗಾಧರ್​, ಜಿಲ್ಲಾ ದಲಿತ ಟಕದ ಅಧ್ಯಕ್ಷ ಕೆ. ಜಯರಾಮು, ಬಿಡದಿ ಟಕದ ಅಧ್ಯಕ್ಷ ಮಂಜುನಾಥ್​, ಉಪಾಧ್ಯಕ್ಷ ಕೃಷ್ಣಮೂರ್ತಿ, ತಾಲೂಕು ಮಹಿಳಾ ಟಕದ ಅಧ್ಯೆ ಭಾಗ್ಯಸುಧಾ, ತಾಲೂಕು ಪ್ರಧಾನ ಕಾರ್ಯದರ್ಶಿ ಕುಮಾರ್​, ನಗರ ಟಕದ ಅಧ್ಯಕ್ಷ ಪ್ರಸನ್ನ, ಮುಖಂಡರಾದ ಯತೀಶ್​, ವಿಜಯಲ್ಮ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net