ವಿತಂಡ ವಿವಾದ ಸೃಷ್ಟಿಸಿದ ಸಿದ್ದರಾಮಯ್ಯ: ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಕಿಡಿ

Siddaramaiah
Published on

ಬೆಂಗಳೂರು: ಧರ್ಮಗುರುಗಳ ದರ್ಶನಕ್ಕೆ ತೆರಳಿದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಅಲ್ಲಿಯೂ ವಿತಂಡ ವಿವಾದ ಸೃಷ್ಟಿಸಿರುವುದು ಎಷ್ಟು ಸರಿ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಕಿಡಿಕಾರಿದ್ದಾರೆ.

ಜನ ವಿರೋಧಿ ಅಡಳಿತ ಹಾಗೂ ರಾಜಕಾರಣದ ವೈಫಲ್ಯ ಮುಚ್ಚಿಕೊಳ್ಳಲು ಧರ್ಮ ರಾಜಕಾರಣಕ್ಕೆ ಕೈಹಾಕಿ ಮುಖಭಂಗ ಅನುಭವಿಸಿದ ಸಿದ್ದರಾಮಯ್ಯನವರಿಂದ ಪಶ್ಚಾತ್ತಾಪದ ಮಾತು ಯಾರೂ ನಿರೀಕ್ಷಿಸುವುದಿಲ್ಲ ಎಂದು ಕಾಲೆಳೆದಿದ್ದಾರೆ.

ವಿಜಯೇಂದ್ರ ಅವರು ತಮ್ಮ ಟ್ವಿಟರ್ ಖಾತೆ ಮೂಲಕ ಸರಣಿ ಟ್ವೀಟ್ ಮಾಡಿದ್ದು, ಒಂದು ಕಡೆ ಧರ್ಮ ಒಡೆಯುವ, ಮತ್ತೊಂದು ಕಡೆ ವೀರ ಸಾವರ್ಕರ್ ಅಂತಹ ಸ್ವಾತಂತ್ರ್ಯ ಸೇನಾನಿಗಳನ್ನು ಅಪಮಾನಿಸುವ ಮೂಲಕ ಮತಾಂಧರನ್ನು ಎತ್ತಿ ಕಟ್ಟುವ ನಿಮ್ಮ ನಡೆಯನ್ನು ಜನರು ಗಮನಿಸುತ್ತಿದ್ದಾರೆ.

ಧರ್ಮ ರಾಜಕಾರಣದ ಬಿಸಿ ಅನುಭವಿಸಿಯೂ ಮತ್ತದೇ ಹಾದಿಯಲ್ಲಿ ಸಾಗಿರುವ ನಿಮಗಾಗಿ ದೊಡ್ಡ ಕಂದಕ ಕಾಯುತ್ತಿದೆ ಎಂದು ಸಿದ್ದರಾಮಯ್ಯ ಅವರಿಗೆ‌ ಬಿ.ವೈ.ವಿಜಯೇಂದ್ರ ಕುಟುಕಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net