ಸಿದ್ದಲಿಂಗ ಶ್ರೀಗಳು 22 ರಂದು ಅಯೋಧ್ಯೆಗೆ ತೆರಳಲು ಆಗುತ್ತಿಲ್ಲ ?

Siddalinga_Swamiji_Ayodhya
Published on

ತುಮಕೂರು: ಅಯೋಧ್ಯಾ ರಾಮ ಮಂದಿರದಲ್ಲಿ ಬಾಲ ರಾಮನ ಪ್ರತಿಷ್ಠಾಪನ ಕಾರ್ಯಕ್ರಮಕ್ಕೆ ಸಿದ್ದಗಂಗಾ ಮಠಾಧ್ಯಕ್ಷ ಸಿದ್ದಲಿಂಗ ಶ್ರೀಗಳಿಗೆ ಆಹ್ವಾನ ಬಂದಿದೆ. ಜ.22 ರಂದು ಅಯೋಧ್ಯೆಯ ನೂತನ ರಾಮಮಂದಿರದಲ್ಲಿ ನಡೆಯಲಿರುವ ಬಾಲರಾಮನ ಪ್ರಾಣ ಪ್ರತಿಷ್ಠೆ ಧಾರ್ಮಿಕ ಸಮಾರಂಭದಲ್ಲಿ ಭಾಗಿಯಾಗುವಂತೆ ಶ್ರೀಗಳನ್ನು ಆಹ್ವಾನಿಸಿಸಲಾಗಿದೆ.

ಈ ಐತಿಹಾಸಿಕ ಸನ್ನಿವೇಶಕ್ಕೆ ಸಾಕ್ಷಿಯಾಗುವಂತೆ ಶ್ರೀರಾಮ ಭೂಮಿ ತೀರ್ಥ ಕ್ಷೇತ್ರದ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಚಂಪತ್‌ರಾಯ್ ಅವರು ಅಧಿಕೃತ ಆಹ್ವಾನ ಪತ್ರ ಬರೆದಿದ್ದು ಭದ್ರತಾ ದೃಷ್ಟಿಯಿಂದ ಜ.20ರಂದೇ ಅಯೋಧ್ಯೆಗೆ ಬಂದು ತಂಗುವಂತೆ ಹಾಗೂ ಜ.23 ರಂದು ಅಲ್ಲಿಂದ ವಾಪಸ್ ತೆರಳಲು ಪತ್ರದಲ್ಲಿ ತಿಳಿಸಲಾಗಿದೆ.

ಶ್ರೀಗಳು ಗೈರು: ಐತಿಹಾಸಿಕ ಧಾರ್ಮಿಕ ಸಮಾರಂಭಕ್ಕೆ ಆಹ್ವಾನ ಬಂದಿದ್ದು ಜ.21 ರಂದು ಶ್ರೀಮಠದಲ್ಲಿ ಲಿಂಗೈಕ್ಯ ಶಿವಕುಮಾರ ಶ್ರೀಗಳು ಪುಣ್ಯಸ್ಮರಣೆ ಕಾರ್ಯಕ್ರಮ ಇರುವುದರಿಂದ ಸಿದ್ದಲಿಂಗ ಶ್ರೀಗಳು ಅಯೋಧ್ಯೆಗೆ ತೆರಳಲು ಸಾಧ್ಯವಾಗುತ್ತಿಲ್ಲ. ಪೂಜ್ಯರ ಪುಣ್ಯಸ್ಮರಣೆ ಕಾರ್ಯಕ್ರಮ ಇರುವುದರಿಂದ ತೆರಳುತ್ತಿಲ್ಲ. ಹಾಗಾಗಿ, ಕಾರ್ಯಕ್ರಮಕ್ಕೆ ಶುಭ ಹಾರೈಕೆ ಪತ್ರವನ್ನು ಕಳುಹಿಸಿಲಾಗಿದೆ ಎಂದು ಮಠಾಧ್ಯಕ್ಷ ಸಿದ್ದಲಿಂಗ ಶ್ರೀಗಳು ಮಾಹಿತಿ ನೀಡಿದ್ದಾರೆ.

ಇಡೀ ದೇಶವೇ ಎದುರು ನೋಡುತ್ತಿರು ಐತಿಹಾಸಿಕ ಕ್ಷಣ ಅಯೋಧ್ಯೆಯಲ್ಲಿ ಜ.22 ರಂದು ಘಟಿಸಲಿದೆ. ಬಾಲರಾಮನ ಪ್ರತಿಷ್ಠೆಗೆ ಸಿದ್ಧತೆ ನಡೆದಿದ್ದು ರಾಮ ಮಂದಿರದ ವಾಸ್ತುಶಿಲ್ಪದ ವಿನ್ಯಾಸವು ಸಂಪ್ರದಾಯ ಮತ್ತು ಆಧುನಿಕತೆಯ ಮಿಶ್ರಣವಾಗಿದೆ. ಇದು ಭಾರತದ ಸಾಂಸ್ಕೃತಿಕ ಮತ್ತು ಧಾರ್ಮಿಕ ವೈವಿಧ್ಯತೆಯನ್ನು ಮಾತ್ರ ಪ್ರದರ್ಶಿಸದೇ ಏಕತೆಯ ಸಂಕೇತವಾಗಿ ಕಾರ್ಯನಿರ್ವಹಿಸುತ್ತದೆ. ಸಿದ್ದಲಿಂಗ ಶ್ರೀಗಳು ಮಠಾಧ್ಯಕ್ಷರು, ಸಿದ್ದಗಂಗಾಮಠ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net