ಡಾ.ಮಂಜುನಾಥ್, ಶ್ರೀ ಪ್ರಭುಚನ್ನಬಸವ ಸ್ವಾಮೀಜಿಗೆ ‘ಸಿದ್ಧಗಂಗಾಶ್ರೀ’ ಪ್ರಶಸ್ತಿ ಪ್ರದಾನ

Siddaganga_Sri
Published on

ತುಮಕೂರು

ಶ್ರೀ ಸಿದ್ಧಗಂಗಾ ಮಠದ ಹಳೆಯ ವಿದ್ಯಾರ್ಥಿಗಳ ಹಾಗೂ ಹಿತೈಷಿಗಳ ಸಂಘದ ವತಿಯಿಂದ ಕೊಡಮಾಡುವ ‘ಸಿದ್ಧಗಂಗಾಶ್ರೀ’ ಪ್ರಶಸ್ತಿಯನ್ನು ಖ್ಯಾತ ಹೃದ್ರೋಗ ತಜ್ಞ, ಜಯದೇವ ಹೃದ್ರೋಗ ಸಂಸ್ಥೆ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ ಹಾಗೂ ಸಾಹಿತ್ಯಿಕ, ಧಾರ್ಮಿಕ ಕ್ಷೇತ್ರದಲ್ಲಿ ಅನನ್ಯ ಸೇವೆ ಸಲ್ಲಿಸುತ್ತಿರುವ ಬೆಳಗಾವಿ ಜಿಲ್ಲೆಯ ಅಥಣಿಯ ಮೋಟಗಿ ಮಠದ ಅಧ್ಯಕ್ಷರಾದ ಪೂಜ್ಯ ಶ್ರೀ ಪ್ರಭು ಚನ್ನಬಸವಸ್ವಾಮೀಜಿಗೆ ಮಠಾಧ್ಯಕ್ಷ ಸಿದ್ದಲಿಂಗ ಶ್ರೀಗಳು ಪ್ರದಾನ ಮಾಡಿದರು. ಪ್ರಶಸ್ತಿಯು 1 ಲಕ್ಷ ನಗದು, ಅಭಿನಂದನಾ ಪತ್ರ ಹಾಗೂ ಸ್ಮರಣಿಕೆಯನ್ನು ಒಳಗೊಂಡಿದೆ.

ಶ್ರೀಮಠದ ಶ್ರೀ ಗೋಸಲ ಸಿದ್ದೇಶ್ವರ ವೇದಿಕೆಯಲ್ಲಿ ಇಂದು ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಡಾ.ಸಿ.ಎನ್.ಮಂಜುನಾಥ್ ಅವರು,

ಶಿಕ್ಷಣ, ಸಂಸ್ಕಾರದ ಸಂಗಮ ಸಿದ್ದಗಂಗೆ. ಇವರೆಡು ಬದುಕಿಗೆ ಅತ್ಯವಶ್ಯ.ಪರಿಪೂರ್ಣ ಜೀವನದ ಬದುಕಿಗೆ ಪದವಿ ಅಲ್ಲ, ಹೃದಯವೈಶಾಲ್ಯತೆ, ಮುಕ್ತ ಮನಸ್ಸು ಅತ್ಯಂತ ಮುಖ್ಯ ಎಂದು ಅಭಿಪ್ರಾಯಪಟ್ಟರು.

ಸೇವೆ ದಾಸೋಹ, ಸತ್ಸಂಗ ಸಮಾನತೆಯ ಸಂದೇಶವನ್ನು ಸಿದ್ದಗಂಗಾ ಸನ್ನಿಧಿಯಲ್ಲಿ ಕಾಣಬಹುದಾಗಿದೆ. ಸಿದ್ದಗಂಗೆ ಶುದ್ಧಗಂಗೆ, ಪ್ರಸಿದ್ಧ ಗಂಗೆ, ಜೀವ ಗಂಗೋತ್ರಿಯ ಮಹಾಗಂಗೆ ಸಿದ್ದಗಂಗೆ ಎಂದು ಶ್ರೀ ಪ್ರಭು ಚನ್ನಬಸವಸ್ವಾಮೀಜಿ ಬಣ್ಣಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net