

ಬನ್ನೂರು: ಹಿಂದೆ ವಯಸ್ಕರಿಗೆ ಬರುತ್ತಿದ್ದ ಕಾಯಿಲೆ ಇತ್ತೀಚೆಗೆ ಮಕ್ಕಳಲ್ಲಿ ಕಾಣಿಸಿಕೊಳ್ಳುತ್ತಿದ್ದು, ಇದಕ್ಕೆ ಆಹಾರದಲ್ಲಿನ ಬದಲಾವಣೆಯೇ ಪ್ರಮುಖಕಾರಣವಾಗಿದೆ ಎಂದು ಡಾ. ಅನಿಸಾ ಶೆರಾವತ್ ಹೇಳಿದರು.
ಪಟ್ಟಣದ ಎಸ್‌ಆರ್‌ಪಿ ರಸ್ತೆಯಲ್ಲಿರುವ ಅನಿಸಾ ಕ್ಲಿನಿಕ್, ವಿಷ್ಣು ಡಯಾಗ್ನೋಸ್ಟಿಕ್ ಸೆಂಟರ್, ಲಯನ್ಸ್ ಬ್ಲೆಡ್ ಭೈರವೇಶ್ವರ ನೇತ್ರಾಲಯ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಆರೋಗ್ಯ ಉಚಿತ ತಪಾಸಣೆ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಸಾಕಷ್ಟು ಸಮಯದಲ್ಲಿ ರೋಗಿಗಳಿಗೆ ಸಮರ್ಪಕ ರಕ್ತ ದೊರಕದೆ ಪ್ರಾಣಹಾನಿಯಾಗುವ ಪ್ರಸಂಗಗಳು ಏರ್ಪಡುತ್ತವೆ. ಯುವ ಜನತೆ ರಕ್ತದಾನ ಮಾಡಲು ಮುಂದೆ ಬರಬೇಕು ಎಂದರು.
ಇತ್ತೀಚೆಗೆ ಹೃದಯಸಂಬಂಧಿ ಕಾಯಿಲೆಗಳು ಹೆಚ್ಚಾಗುತ್ತಿದ್ದು, ಕಾಲಕಾಲಕ್ಕೆ ತಪಾಸಣೆಗೆ ಒಳಪಡಿಸಿಕೊಳ್ಳಬೇಕು. ರಕ್ತದೊತ್ತಡ, ಮಧುಮೇಹ ಪರೀಕ್ಷೆಗಳನ್ನು ಮಾಡಿಸಿಕೊಳ್ಳುವಂತೆ ಸಲಹೆ ನೀಡಿದರು.
ಶಿಬಿರದಲ್ಲಿ ತಲೆನೋವು, ಮಂಡಿನೋವು, ಜ್ವರ, ಕೆಮ್ಮು, ಬಂಜೆತನ, ಥೈರಾಯಿಡ್, ಟಿಎಫ್‌ಟಿ, ಸಿಬಿಸಿ, ಇಸಿಜಿ, ಕಣ್ಣು ಸೇರಿದಂತೆ ಇತರೆ ತಪಾಸಣೆಗಳನ್ನು ನಡೆಸಿ ಔಷಧೋಪಚಾರ ಹಾಗೂ ಸಲಹೆ ನೀಡಲಾಯಿತು. ಶಿಬಿರದಲ್ಲಿ 250ಕ್ಕೂ ಹೆಚ್ಚಿನ ಜನರು ತಪಾಸಣೆಗೆ ಒಳಪಟ್ಟರು.
ಪುರಸಭೆ ಮಾಜಿ ಅಧ್ಯಕ್ಷ ಅಜೀಜುಲ್ಲಾ, ಡಾ. ಸೌಮ್ಯರಾಜ್, ಡಾ. ಸಿ. ಗಿರೀಶ್ ಇತರರು ಇದ್ದರು.