

ಹಿರೇಕೆರೂರ: ಜರ್ಮನಿಯ ಪ್ರತಿಭಾ ಸಂಶಿಮಠ ಎಂಬ ಸಂಸ್ಥೆ ಆಯೋಜಿಸಿದ್ದ ಮಿಸಸ್ ಇಂಡಿಯಾ ಕರ್ನಾಟಕ- 2023ರ ಸ್ಪರ್ಧೆಯಲ್ಲಿ ಮೂಲತಃ ಹಿರೇಕೆರೂರಿನ ಸಾಫ್ಟ್ವೆರ್ ಇಂಜಿನಿಯರ ಶ್ವೇತಾ ಕೊಡದ ಅವರು ವಿಜೇತರಾಗಿದ್ದಾರೆ.
ಅವರು ಬ್ಯೂಟಿ ಪೇಜೆಂಟ್ನಲ್ಲಿ ಭಾಗವಹಿಸಿ ಇಂಟಲೆಕ್ಚುವಲ್ ಹಾಗೂ ಮಿಸಸ್ ಇಂಡಿಯಾ ಕರ್ನಾಟಕ ಜರ್ಮನಿ ಕಿರೀಟವನ್ನು ಗೆದ್ದಿದ್ದಾರೆ. ಶ್ವೇತಾ ಅವರ ಪತಿ ಪ್ರವೀಣ ಬಿರಾದಾರ ಅವರಿಗೆ ಬೆಸ್ಟ್ ಸಪೋರ್ಟಿವ್ ಹಸ್ಬೆಂಡ್ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.