ಹಂಗಳೂರಿನಲ್ಲಿ ಶಟಲ್ ಬ್ಯಾಡ್ಮಿಂಟನ್ ಟೂರ್ನಿ

gan (4)
Published on

ಕುಂದಾಪುರ: ಕೆಥೊಲಿಕ್ ಸಭಾ ಕುಂದಾಪುರ ಘಟಕದ ಆಶ್ರಯದಲ್ಲಿ ವಲಯಮಟ್ಟದ ಶಟಲ್ ಬ್ಯಾಡ್ಮಿಂಟನ್ ಪಂದ್ಯ ಹಂಗಳೂರಿನ ಕೋಸ್ಟಾ ಬ್ಯಾಡ್ಮಿಂಟನ್ ಸೆಂಟರ್‌ನಲ್ಲಿ ಭಾನುವಾರ ನಡೆಯಿತು. ನಿವೃತ್ತ ಡಿವೈಎಸ್‌ಪಿ ವೆಲೆಂಟೈನ್ ಡಿಸೋಜ ಪಂದ್ಯಾಟ ಉದ್ಘಾಟಿಸಿದರು. ಸೈಂಟ್ ಪಿಯುಸ್ ಚರ್ಚಿನ ಧರ್ಮಗುರು ಆಲ್ಬರ್ಟ್ ಕ್ರಾಸ್ತಾ ವಿಜೇತರಿಗೆ ಪ್ರಶಸ್ತಿ ಪ್ರದಾನಿಸಿದರು.

ಕೆಥೊಲಿಕ್ ಸಭಾ ವಲಯಾಧ್ಯಕ್ಷ ರೇಮಿ ಫನಾರ್ಂಡಿಸ್ ಅಧ್ಯಕ್ಷತೆ ವಹಿಸಿದ್ದರು. ರಾಕ್ ಡಿಕೋಸ್ಟ, ಉದ್ಯಮಿ ವೃಂದಾ ಲೂವಿಸ್, ಕೋಸ್ಟಾ ಬ್ಯಾಡ್ಮಿಂಟನ್ ಕೋರ್ಟ್‌ನ ಮಾಲಕ ಅಜಿತ್ ಡಿಕೋಸ್ಟಾ ಉಪಸ್ಥಿತರಿದ್ದರು. ವಿಲ್ಸನ್ ಅಲ್ಮೇಡಾ ಸ್ವಾಗತಿಸಿದರು. ಶೈಲಾ ಅಲ್ಮೇಡಾ ವಿಜೇತರ ಪಟ್ಟಿ ವಾಚಿಸಿದರು. ಶಾಂತಿ ಪಿಂಟೊ ವಂದಿಸಿದರು. ವಿನೋದ್ ಕ್ರಾಸ್ಟೊ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net