ಷಟ್ಲ್ ಬ್ಯಾಡ್ಮಿಂಟನ್ ಕ್ರೀಡಾಕೂಟ

New Project (41)
Published on

ಮುಳ್ಳೇರಿಯ: ಶಿವಳ್ಳಿ ಬ್ರಾಹ್ಮಣ ಸಮಾಜದ ಸಂಘಟನೆ ಕಾಸರಗೋಡು ಶಿವಳ್ಳಿ ಬ್ರಾಹ್ಮಣ ಸಭಾ ವತಿಯಿಂದ ಭಾನುವಾರ ವಾರ್ಷಿಕ ಕ್ರೀಡಾಕೂಟದ ಅಂಗವಾಗಿ ಷಟ್ಲ್ ಬ್ಯಾಡ್ಮಿಂಟನ್ ಕ್ರೀಡಾಕೂಟ ಮುಳ್ಳೇರಿಯ ಸಮೀಪದ ಕರ್ಮಂತೋಡು ಪ್ರೇಂಡ್ಸ್ ಬ್ಯಾಡ್ಮಿಂಟನ್ ಕ್ರೀಡಾಂಗಣದಲ್ಲಿ ಜರುಗಿತು. ಜಿಲ್ಲೆಯಾದ್ಯಂತ ಇರುವ ಸಮಾಜದ 67 ಸದಸ್ಯರು ಈ ಕ್ರೀಡಾಕೂಟದಲ್ಲಿ ಭಾಗವಹಿಸಿದರು. ಸಂಘದ ಅಧ್ಯಕ್ಷ ಮಂಜುನಾಥ ತೇರಕುಂಜತ್ತಾಯ, ಕಾರ್ಯದರ್ಶಿ ಚೇತನರಾಮ ನೂರಿತ್ತಾಯ, ಮುಳ್ಳೇರಿಯ ಮುಂದಾಳು ಶ್ರೀನಿವಾಸ ಅಮ್ಮಣ್ಣಾಯ, ಸತೀಶ ಪುಣಿಂಚಿತ್ತಾಯ, ಸೀತಾರಾಮ ಕಡಂಮಣ್ಣಾಯ ಪದಕ ವಿತರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net