

ಬದಿಯಡ್ಕ: ಅಗಲ್ಪಾಡಿ ಶ್ರೀ ಗೋಪಾಲಕೃಷ್ಣ ಭಜನಾ ಮಂದಿರದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಹಾಗೂ ನೂತನ ಮುಖಮಂಟಪ ಲೋಕಾರ್ಪಣೆ ಭಾನುವಾರ ವಿವಿಧ ವಿಧಿವಿಧಾನಗಳೊಂದಿಗೆ ನೆರವೇರಿತು.
ಬೆಳಗ್ಗೆ ಸಂಗೀತಾರ್ಚನೆ, ದ್ವಾದಶ ನಾಳೀಕೇರ ಶ್ರೀ ಮಹಾಗಣಪತಿ ಹೋಮ, ಪೂರ್ಣಾಹುತಿ, ಧಾರ್ಮಿಕ ಮುಂದಾಳು ಬಿ.ವಸಂತ ಪೈ ಬದಿಯಡ್ಕ ಅವರಿಂದ ದೀಪ ಪ್ರಜ್ವಲನೆ, ಪೂಜೆ, ಚಪ್ಪರ ಮದುವೆ, ತುಲಾಭಾರ ಸೇವೆ, ಮಹಿಳೆಯರಿಗೆ ತುಳಸಿಹಾರ ನೇಯುವ ಸ್ಪರ್ಧೆ, ವೇದಿತಾ ಪದ್ಮಾರು ಮತ್ತು ಪಾಂಚಜನ್ಯ ಬಾಲಗೋಕುಲ ವತಿಯಿಂದ ಮೊಸರುಕುಡಿಕೆ ಶಾಸ್ತ್ರೀಯ ಪ್ರಸ್ತುತಿ, ವಿವಿಧ ಭಜನಾ ತಂಡಗಳಿಂದ ಭಜನೆ ನಡೆಯಿತು.
ಉದ್ಘಾಟನಾ ಸಮಾರಂಭದಲ್ಲಿ ಜಯದೇವ ಖಂಡಿಗೆ, ಉದಯ ಭಟ್ ಕೋಳಿಕ್ಕಜೆ, ಸುವರ್ಣ ಅಗಲ್ಪಾಡಿ, ಐತ್ತಪ್ಪ ಮವ್ವಾರು, ರವೀಂದ್ರನಾಥ ಭಂಡಾರಿ ನಾರಂಪಾಡಿ, ನಿರಂಜನ ಪೆರಡಾಲ ಮೊದಲಾದವರಿದ್ದರು.
ಬಳಿಕ ಕರ್ನಾಟಕ ಶಾಸ್ತ್ರೀಯ ಸಂಗೀತ, ಅಗಲ್ಪಾಡಿ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಿಂದ ಶ್ರೀ ಮಂದಿರಕ್ಕೆ ಮುದ್ದುಕೃಷ್ಣ ರಾಧೆಯರ ವೇಷದೊಂದಿಗೆ ಶೋಭಾಯಾತ್ರೆ, ನಂತರ ಭಕ್ತಿಭಾವ ಗಾನಯಾನ, ಮಧ್ಯಾಹ್ನ ಗಾನ ಮಾಧುರ್ಯಂ, ಮಹಾಪೂಜೆ ನೆರವೇರಿತು.
ಧಾರ್ಮಿಕ ಸಭೆ
ಪಾಂಚಜನ್ಯ ವೇದಿಕೆಯಲ್ಲಿ ಅಪರಾಹ್ನ ಧಾರ್ಮಿಕ ಸಭೆಯನ್ನು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಉದ್ಘಾಟಿಸಿದರು. ಸುಬ್ರಹ್ಮಣ್ಯ ಭಟ್ ತಲೇಕ ಅಧ್ಯಕ್ಷತೆ ವಹಿಸಿದ್ದರು. ಸಂಸದ ಕ್ಯಾ.ಬ್ರಿಜೇಶ್ ಚೌಟ, ಸಂಕಪ್ಪ ಪೂಜಾರಿ ಉಡುಪಿ, ಡಾ.ಮನೋಹರ ಎಂ.ಜಿ.ಮುಳ್ಳೇರಿಯ, ಕೆ.ಪಿ.ಮೋಹನ್‌ದಾಸ್, ಬಾಲಸುಬ್ರಹ್ಮಣ್ಯ ಭಟ್ ಸರ್ಪಮಲೆ, ಕೃಷ್ಣಮೂರ್ತಿ ಪುದುಕೋಳಿ, ಡಾ.ಕಿಶೋರ್ ಕುಣಿಕುಳ್ಳಾಯ, ಮಧುಸೂದನ ಆಯರ್ ಮಂಗಳೂರು, ರವಿಚಂದ್ರ ಮಂಗಳೂರು, ಹರೀಶ್ ಗೋಸಾಡ, ವೆಂಕಟ್ರಮಣ ಉಪ್ಪಂಗಳ, ಹರಿನಾರಾಯಣ ಅಗಲ್ಪಾಡಿ, ಆನಂದ ಕೆ.ಮವ್ವಾರು, ಪ್ರಶಾಂತ್ ಕುಣಿಕುಳ್ಳಾಯ ಉಬ್ರಂಗಳ, ಮುರಳಿ ಮಧೂರು, ಕರಿಯಪ್ಪ ಮಾರ್ಪನಡ್ಕ, ಬಾಬು ಅಗಲ್ಪಾಡಿ, ಸುಧಾಮ ಪದ್ಮಾರು ಪಾಲ್ಗೊಂಡಿದ್ದರು. ರಾಜೇಶ್ ಅಗಲ್ಪಾಡಿ ಸ್ವಾಗತಿಸಿದರು. ಲಾವಣ್ಯ ಗಿರೀಶ್ ಅಗಲ್ಪಾಡಿ ಪ್ರಾರ್ಥನೆ ಹಾಡಿದರು. ರಮೇಶ್‌ಕೃಷ್ಣ ಪದ್ಮಾರು ನಿರೂಪಿಸಿದರು. ಪ್ರೊ.ಎ.ಶ್ರೀನಾಥ್ ವಂದಿಸಿದರು.