ಮುಳಿಂಜ ಶಾಲೆಯಲ್ಲಿ ಸ್ಕೂಲ್ ಒಲಿಂಪಿಕ್ಸ್

New Project (9)
Published on

ಉಪ್ಪಳ: ಮುಳಿಂಜ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ವಿವಿಧ ಸ್ಪರ್ಧೆ ಸಹಿತ ಸ್ಕೂಲ್ ಒಲಿಂಪಿಕ್ಸ್ ಇತ್ತೀಚೆಗೆ ಜರುಗಿತು. ಕಾಸರಗೋಡು ಜಿಲ್ಲಾ ಪಂಚಾಯಿತಿ ಸದಸ್ಯ ಗೋಲ್ಡನ್ ರೆಹಮಾನ್ ಅವರು ಶಾಲಾ ಧ್ವಜವನ್ನು ಕ್ರೀಡಾ ಮಂತ್ರಿ ಸಾಹಿಲ್‌ಗೆ ಹಸ್ತಾಂತರಿ ಕ್ರೀಡಾಕೂಟ ಉದ್ಘಾಟಿಸಿದರು.

ಪಿ.ಟಿ.ಎ ಅಧ್ಯಕ್ಷ ಇಬ್ರಾಹಿಂ ಹನೀಫಿ ಶುಭಹಾರೈಸಿದರು. ಮುಖ್ಯಶಿಕ್ಷಕಿ ಚಿತ್ರಾವತಿ ಚಿಗುರುಪಾದೆ ಸ್ವಾಗತಿಸಿದರು. ಶಿಕ್ಷಕ ಅಬ್ದುಲ್ ಬಶೀರ್ ವಂದಿಸಿದರು. ರಿಯಾಜ್ ಪೆರಿಂಗಡಿ ಕಾರ್ಯಕ್ರಮ ನಿರೂಪಿಸಿದರು.

ಸಮಾರೋಪ: ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನಿಸಲಾಯಿತು. ಪ್ರಮುಖರಾದ ಸುಮಾ ದೇವಿ, ಸುಷ್ಮಾ, ಬಿಂದ್ಯಾ, ಐಶ್ವರ್ಯ, ಚಿತ್ರಾವತಿ ಉಪಸ್ಥಿತರಿದ್ದರು. ಜಸೀಲ ಟೀಚರ್ ಸ್ವಾಗತಿಸಿದರು. ಧನ್ಯಾ ವಂದಿಸಿದರು. ಅನಿತಾ ನಿರೂಪಿಸಿದರು. ರೇಷ್ಮಾ ಸಹಕರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net