ಶ್ರೀ ವಿಶ್ವಕರ್ಮ ಪೂಜಾ ಮಹೋತ್ಸವ

vishwakarma
ಹೆಬ್ರಿ ಸಮೀಪದ ಪೆರ್ಡೂರು ಶ್ರೀ ವಿಶ್ವಕರ್ಮ ಸಮಾಜ ಸೇವಾ ಸಂಘ ವತಿಯಿಂದ ಮೂಡುಬಿದಿರೆ ದಿಲೀಪ್ ಪುರೋಹಿತ್ ನೇತೃತ್ವದಲ್ಲಿ ಶ್ರೀವಿಶ್ವಕರ್ಮ ಪೂಜಾ ಮಹೋತ್ಸವ ಭಾನುವಾರ ನಡೆಯಿತು
Published on

ಹೆಬ್ರಿ: ಪೆರ್ಡೂರು ಶ್ರೀ ವಿಶ್ವಕರ್ಮ ಸಮಾಜ ಸೇವಾ ಸಂಘ ವತಿಯಿಂದ ಮೂಡುಬಿದಿರೆ ದಿಲೀಪ್ ಪುರೋಹಿತ್ ನೇತೃತ್ವದಲ್ಲಿ ಶ್ರೀವಿಶ್ವಕರ್ಮ ಪೂಜಾ ಮಹೋತ್ಸವ ಭಾನುವಾರ ನಡೆಯಿತು.

ಪೆರ್ಡೂರು ಶ್ರೀ ವಿಶ್ವಕರ್ಮ ಸಮಾಜ ಸೇವಾ ಸಂಘ ಅಧ್ಯಕ್ಷ ವೆಂಕಟರಮಣ ಆಚಾರ್ಯ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ರಮೇಶ ಆಚಾರ್ಯ ಹರಿಖಂಡಿಗೆ, ಗೌರವಾಧ್ಯಕ್ಷ ಭಾಸ್ಕರ ಆಚಾರ್ಯ ಪೆರ್ಡೂರು, ಮಹಿಳಾ ಮಂಡಳಿ ಅಧ್ಯಕ್ಷೆ ಸುಕನ್ಯಾ ಆಚಾರ್ಯ ಪಾಡಿಗಾರ, ಯುವ ವೃಂದ ಅಧ್ಯಕ್ಷ ದಯಾನಂದ ಆಚಾರ್ಯ ಪಕ್ಕಾಲು, ಕಾರ್ಯದರ್ಶಿ ರಾಜೇಶ ಆಚಾರ್ಯ, ಕೋಶಾಧಿಕಾರಿ ರವೀಂದ್ರ ಆಚಾರ್ಯ, ಸಂಘ ಪದಾಧಿಕಾರಿಗಳು, ಸದಸ್ಯರು, ಪ್ರಮುಖರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net