ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನ ಹರಿದ್ವಾರ ಶಾಖಾ ಮಠ ವಾರ್ಷಿಕೋತ್ಸವ

New Project (36)
Published on

ಬೆಳ್ತಂಗಡಿ: ಧರ್ಮಸ್ಥಳ ನಿತ್ಯಾನಂದ ನಗರದ ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನ ಹರಿದ್ವಾರ ಸಾಧನಾ ಕುಟೀರದ 8ನೇ ವಾರ್ಷಿಕೋತ್ಸವ ಮಹಾ ಸಂಸ್ಥಾನದ ಪೀಠಾಧೀಶ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಅವರ ನೇತೃತ್ವದಲ್ಲಿ ನ.25ರಂದು ವೈದಿಕ ವಿಧಿ ವಿಧಾನಗಳೊಂದಿಗೆ ನಡೆಯಿತು.

ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಶ್ರೀ ಮಹಂತ್ ವಿದ್ಯಾನಂದ ಸರಸ್ವತಿ ಮಹಾರಾಜ್, ಮಹಾಮಂಡಲೇಶ್ವರ 1008 ಶ್ರೀ ಸ್ವಾಮಿ ಆನಂದ ಚೈತನ್ಯ ಸರಸ್ವತಿ ಮಹಾರಾಜ್, ಮಹಾಮಂಡಲೇಶ್ವರ 1008 ಶ್ರೀ ಸ್ವಾಮಿ ರಾಮೇಶ್ವರಾನಂದ ಸರಸ್ವತಿ ಮಹಾರಾಜ್, ಮಹಾಮಂಡಲೇಶ್ವರ 1008 ಶ್ರೀ ಸ್ವಾಮಿ ಶಿವ ಪ್ರೇಮಾನಂದಪುರಿ ಮಹಾರಾಜ್, ಮಹಾಮಂಡಲೇಶ್ವರ್ 1008 ಶ್ರೀ ಸ್ವಾಮಿ ಲಲಿತಾನಂದ ಗಿರಿ ಮಹಾರಾಜ್, ಶ್ರೀ ಮಹಂತ್ ದೇವಾನಂದ ಸರಸ್ವತಿ ಮಹಾರಾಜ್, ಶ್ರೀ ಮಹಂತ್ ಇಂದ್ರಾನಂದ ಸರಸ್ವತಿ, ಮಹಂತ್ ಮಾಧವಾನಂದ ಸರಸ್ವತಿ, ಮಹಂತ್ ಜ್ಞಾನಪ್ರೇಮಾನಂದ ಪುರಿ ಮಹಾರಾಜ್, ಮೀನುಗಾರಿಕೆ ಸಚಿವ ಮಂಕಾಳ ಎಸ್.ವೈದ್ಯ, ಹರಿದ್ವಾರ ಶಾಸಕ ಮದನ್ ಕೌಶಿಕ್, ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಮಂಗಳೂರು ಕಾಪೋರೇಟರ್ ಕಿರಣ್ ಕುಮಾರ್, ಬೆಳ್ತಂಗಡಿ ಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘದ ಮಾಜಿ ಅಧ್ಯಕ್ಷ ಪಿ. ಕೆ.ರಾಜು ಪೂಜಾರಿ ಕಾಶಿಪಟ್ನ, ಬಹ್ರೇನ್ ಬಿಲ್ಲವ ಸಂಘದ ಅಧ್ಯಕ್ಷ ಹರೀಶ್, ಭಟ್ಕಳದ ಕೃಷ್ಣ ನಾಯ್ಕ, ಗೋವಿಂದ ನಾಯ್ಕ, ಈಶ್ವರ ನಾಯ್ಕ, ಗಣೇಶ್ ನೇತ್ರಾಣಿ, ಗಂಗಾಧರ್ ಬೆಂಗಳೂರು, ರಮೇಶ್ ಸಾಲಿಯಾನ್ ದೆಹಲಿ, ಜಿತೇಶ್ ಉಡುಪಿ, ಮಠದ ಟ್ರಸ್ಟಿ ತುಕಾರಾಮ ಸಾಲಿಯಾನ್, ರವೀಂದ್ರ ಪೂಜಾರಿ ಆರ್ಲ ಮೊದಲಾದವರು ಹಾಜರಿದ್ದರು. ಸ್ವಾಮೀಜಿ ನೇತೃತ್ವದಲ್ಲಿ ಪವಿತ್ರ ಗಂಗಾ ನಡಿಯಲ್ಲಿ ಗಂಗಾ ಸ್ನಾನ, ಗಂಗಾ ಆರತಿ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net