ಶ್ರೀ ರಕ್ತೇಶ್ವರಿ ಸನ್ನಿಧಿಯಲ್ಲಿ ಚಂಡಿಕಾಯಾಗ

chandikayaga
Published on

ಬಂಟ್ವಾಳ: ಬಿ.ಸಿ.ರೋಡ್‌ನ ಶ್ರೀ ರಕ್ತೇಶ್ವರಿ ದೇವಿ ದೇವಸ್ಥಾನದಲ್ಲಿ ಶರನ್ನವರಾತ್ರಿ ಮಹೋತ್ಸವದ ಪ್ರಯುಕ್ತ ಭಾನುವಾರ ಮಹಾಚಂಡಿಕಾ ಯಾಗ ನಡೆಯಿತು.

ಅಕ್ಟೋಬರ್ 3ರಿಂದ ಶ್ರೀದೇವಿ ಸನ್ನಿಧಿಯಲ್ಲಿ ಶರನ್ನವರಾತ್ರಿ ಮಹೋತ್ಸವ ನಡೆದು ವಿಜಯದಶಮಿಯ ಅಂಗವಾಗಿ ಬ್ರಹ್ಮಶ್ರೀ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ಮಾರ್ಗದರ್ಶನದಂತೆ, ಬಾಲಕೃಷ್ಣ ಆಚಾರ್ ಕಾರಿಂಜ ನೇತೃತ್ವದಲ್ಲಿ ಮಹಾಚಂಡಿಕಾ ಯಾಗ ನಡೆದು ಬೆಳಗ್ಗೆ 11.30ರ ವೇಳೆಗೆ ಪೂರ್ಣಾಹುತಿ ನಡೆಯಿತು.

ದೇವಸ್ಥಾನದ ಸೇವಾ ಸಮಿತಿಯ ಅಧ್ಯಕ್ಷ ಬಿ.ವಿಶ್ವನಾಥ, ಸಮಿತಿಯ ಪದಾಧಿಕಾರಿಗಳು, ಭಕ್ತರು ಮಹಾಚಂಡಿಕಾ ಯಾಗದಲ್ಲಿ ಭಾಗಿಯಾಗಿ ಪ್ರಸಾದ ಸ್ವೀಕರಿಸಿದರು. ಬಳಿಕ ಶ್ರೀ ರಕ್ತೇಶ್ವರಿ ದೇವಿಗೆ ಮಹಾಪೂಜೆ ನಡೆದು ಅನ್ನದಾನ ನೆರವೇರಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net