ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಪುರಾಣ ಆರಂಭ

21ALD 07
ಬೆಟಗೇರಿ ಗ್ರಾಮದ ಶ್ರೀ ರಾಜರಾಜೇಶ್ವರಿ ದೇವಸ್ಥಾನ,
Published on

ಅಳವಂಡಿ: ಸಮೀಪದ ಬೆಟಗೇರಿ ಗ್ರಾಮದ ಶ್ರೀ ರಾಜ ರಾಜೇಶ್ವರಿ ದೇವಸ್ಥಾನದಲ್ಲಿ ಶರನ್ನವರಾತ್ರಿ ಪ್ರಯಕ್ತ ಶ್ರೀದೇವಿ ಪುರಾಣ ಸೆ.22ರಿಂದ ಅದ್ದೂರಿಯಾಗಿ ಆರಂಭವಾಗಲಿದೆ.

ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಹಬ್ಬದ ಸಂಭ್ರಮ ಮನೆ ಮಾಡಿದೆ. ದೇವಸ್ಥಾನವನ್ನು ತಳಿರು, ತೋರಣ, ಹೂಗಳಿಂದ ಅಲಂಕರಿಸಲಾಗಿದೆ. ಸೆ.22ರಂದು ಬೆಳಗ್ಗೆ ಶ್ರೀದೇವಿಗೆ ಪೂಜೆ, ಅಭಿಷೇಕ ಮಾಡಲಾಗುವುದು. ನಂತರ ಸಿಂಗರಿಸಿದ ಎತ್ತಿನಬಂಡಿಯಲ್ಲಿ ಸಮೀಪದ ತಿಗರಿ ಗ್ರಾಮದ ತುಂಗಭದ್ರಾ ನದಿ ಪಾತ್ರಕ್ಕೆ ತೆರಳಿ ಗಂಗಾಪೂಜೆ ಸಲ್ಲಿಸಲಾಗುವುದು.

ದೇವರ ಘಟಸ್ಥಾಪನೆ ನಡೆಯುತ್ತದೆ. ಪುರಾಣದ ಪ್ರತಿದಿನ ಪುರಾಣ ಗ್ರಂಥ ಬಡಿಗೇರ ಅವರ ಮನೆಯಿಂದ ಹಾಗೂ ಕಳಸ ಶ್ರೀ ಗುರುಬಸಯ್ಯ ಬ್ರಹನ್ಮಠ ಮನೆಯಿಂದ ಶ್ರೀ ದುರ್ಗಾದೇವಿ ಭಜನೆ ಮೂಲಕ ಆಗಮಿಸುತ್ತದೆ. ದಶಮಿಯ ದಿವಸ ದೇವತೆ ಮೆರವಣಿಗೆ ಹಾಗೂ ಬನ್ನಿಮುಡಿಯುವ ಕಾರ್ಯಕ್ರಮ ನಡೆಯಲಿದೆ.

ಪುರಾಣ ಪ್ರವಚನಕಾರರಾಗಿ ಸಂಸ್ಕೃತ ಪಂಡಿತ ಶ್ರೀತಪೋನಿಧಿ ಮುತ್ತೇಶ್ವರ ಸ್ವಾಮಿ, ಪಠಣಕಾರರಾಗಿ ಕಾತರಕಿ ಶ್ರೀ ಜಗದಯ್ಯ ಸ್ವಾಮಿ ಸಾಲಿಮಠ, ತಬಲಾ ಬೆಟಗೇರಿ ಪ್ರಭು ಶಿವಶಿಂಪಿಗೇರ ಕಾರ್ಯ ನಿರ್ವಹಿಸಲಿದ್ದಾರೆ. ಪ್ರಮುಖರಾದ ಮುತ್ತಯ್ಯ ಹಿರೇಮಠ,

ಅಜ್ಜಪ್ಪ ಸಜ್ಜನ, ವೀರಣ್ಣ ಬಿನ್ನಾಳ, ಮಲ್ಲಿಕಾರ್ಜುನ, ವಿಠಲ್, ಶೇಖಪ್ಪ, ಮಲ್ಲಪ್ಪ ಸಜ್ಜನ, ಗುರುಬಸಯ್ಯ, ನಾಗಪ್ಪ, ಅರುಣ, ಬಸವರಾಜ ನಾಗರಡ್ಡಿ, ಶ್ರೀನಿವಾಸ, ನಿಂಗರಡ್ಡಿ, ವೆಂಕಣ್ಣ, ಮಂಜುನಾಥ, ದೇವಪ್ಪ, ಹೊನ್ನಪ್ಪ, ವೀರೇಶ, ಕರಬಸಗೌಡ, ಮೇಘರಾಜ, ಪ್ರವೀಣಕುಮಾರ, ಮಂಜುನಾಥ, ಶಿವು, ಶಂಕ್ರಪ್ಪ, ಪಕೀರಪ್ಪ, ರಾಜೇಂದ್ರಪ್ಪ, ಮಂಜುನಾಥ, ಸುರೇಶ, ಮಲ್ಲಪ್ಪ ಇತರರಿದ್ದರು.

ಬೆಟಗೇರಿ ಗ್ರಾಮದ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ನಡೆಯುವ ಶ್ರೀದೇವಿ ಪುರಾಣ ಭಕ್ತಿಯಿಂದ ಹಾಗೂ ಸಂಭ್ರಮದಿಂದ ನಡೆಯಲಿದೆ. ನವರಾತ್ರಿ ಪೂರ್ತಿ ಪುರಾಣ ಪ್ರವಚನ ನಡೆಯಲಿದೆ. ಭಕ್ತರು ಶ್ರದ್ಧಯಿಂದ ದೇವಿ ಆರಾಧಿಸುತ್ತಾರೆ. ಬಸವರಾಜ ನಾಗರಡ್ಡಿ ಎಸ್‌ಡಿಎಂಸಿ ಅಧ್ಯಕ್ಷ ಬೆಟಗೇರಿ. ಗ್ರಾಮದಲ್ಲಿ ಶ್ರೀದೇವಿ ಪುರಾಣದ ಅಂಗವಾಗಿ ಗಂಗಾಪೂಜೆ, ದೇವಿ ಮೆರವಣಿಗೆ, ಬನ್ನಿಮುಡಿಯುವ ಕಾರ್ಯಕ್ರಮಗಳು ಅದ್ದೂರಿಯಿಂದ ನಡೆಯಲಿದೆ. ಪ್ರತಿದಿನ ದೇವಿ ಆರಾಧನೆ, ಅಭಿಷೇಕ, ಪೂಜೆ ಕಾರ್ಯಗಳು ನಡೆಯಲಿವೆ. ಪ್ರವೀಣ ಕುಮಾರ ಪಾಟೀಲ ಗ್ರಾಮಸ್ಥ ಬೆಟಗೇರಿ,

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net