

ಹಾಸನ: ನಗರದ ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಹಬ್ಬವನ್ನು ಇತ್ತೀಚೆಗೆ ಭಕ್ತಿಭಾವದಿಂದ ಆಚರಿಸಲಾಯಿತು.
ವಿದ್ಯಾ ಕೇಂದ್ರದ ಕನ್ನಡ ವಿಭಾಗದ ಶಿಕ್ಷಕ ಅರುಣ್ ಉಳ್ಳಾಲ್ ಮಾತನಾಡಿ, ಶ್ರೀ ಕೃಷ್ಣ ಜನ್ಮಾಷ್ಟಮಿಯ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಮೌಲ್ಯಗಳು ಹಾಗೂ ಶ್ರೀ ಕೃಷ್ಣನ ಉಪದೇಶಗಳ ಕುರಿತು ವಿವರಿಸಿ, ವಿದ್ಯಾರ್ಥಿಗಳು ಸತ್ಯ, ಧರ್ಮ ಮತ್ತು ಭಕ್ತಿಯ ಮೌಲ್ಯಗಳನ್ನು ಅಳವಡಿಸಿಕೊಳ್ಳುವಂತೆ ಕಿವಿಮಾತು ಹೇಳಿದರು.
4ನೇ ತರಗತಿ ಬಿ ವಿಭಾಗದ ರಂಜನಿ ಶ್ರೀ ಕೃಷ್ಣನ ಜನನ, ಲೀಲೆ ಹಾಗೂ ಧರ್ಮ, ಭಕ್ತಿಯ ಸಂದೇಶವನ್ನು ವಿವರಿಸಿದಳು. 6ನೇ ತರಗತಿ ಎ ವಿಭಾಗದ ಅದ್ವೈತ ಶಾಸ್ತ್ರಿ, ಸಾರಾ ಹಾಗೂ ಜಸ್ಮಿತಾ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಕುಂಡ ಒಡೆಯುವ ಸ್ಪರ್ಧೆ ಗಮನ ಸೆಳೆಯಿತು. ವಿದ್ಯಾಕೇಂದ್ರದ ನಾಲ್ಕು ವಾಹಿನಿಯ ಮಕ್ಕಳು ಉತ್ಸಾಹಭರಿತರಾಗಿ ಪಾಲ್ಗೊಂಡರು. ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರ ಶಾಲೆಯ ಮುಖ್ಯಶಿಕ್ಷಕಿ ಉಮಾ ಎಸ್.ಾಟೀಲ್, ಶಿಕ್ಷಕರು, ಸಿಬ್ಬಂದಿ, ವಿದ್ಯಾರ್ಥಿಗಳು ಇದ್ದರು.