

ಮಧೂರು: ಉಳಿಯ ಶ್ರೀ ಧನ್ವಂತರಿ ಸನ್ನಿಧಿಯಲ್ಲಿ ಧನ್ವಂತರಿ ಜಯಂತಿ ಉಳಿಯತ್ತಾಯ ವಿಷ್ಣು ಆಸ್ರರ ನೇತೃತ್ವದಲ್ಲಿ ಸೋಮವಾರ ನಡೆಯಿತು.
ಬೆಳಗ್ಗೆ ಶ್ರೀ ದೇವರಿಗೆ ಗಣಪತಿ ಹವನ, ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ಧನ್ವಂತರಿ ಹವನ, ಪವಮಾನ ಅಭಿಷೇಕ, ದೇವರಿಗೆ ವಿಶೇಷ ಪೂಜೆ ಜರುಗಿತು.
ಕಾರ್ಯಕ್ರಮದ ಅಂಗವಾಗಿ ಪದ್ಮಪ್ರಿಯ ಭಜನಾ ಮಂಡಳಿಯಿಂದ ಭಜನಾ ಸೇವೆ, ಅನಂತಪದ್ಮನಾಭ ಅವರಿಂದ ವಯಲಿನ್ ಕಾರ್ಯಕ್ರಮ, ವಿದ್ವಾನ್ ವಸಂತ ಗೋಸಾಡ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಿತು. ಶ್ರೀ ಧನ್ವಂತರಿ ಯಕ್ಷಗಾನ ಕಲಾ ಸಂಘದ ನೇತೃತ್ವದಲ್ಲಿ ಮಧ್ಯಾಹ್ನ ಅತಿಥಿ ಕಲಾವಿದರಾದ ಹರೀಶ್ ಬಳಂತಿಮೊಗರು, ರವಿರಾಜ್ ಪನೆಯಾಲ, ವಾಸುದೇವ ರಂಗ ಭಟ್, ಸತ್ಯನಾರಾಯಣ ಪುಣಿಚಿತ್ತಾಯ, ಸಂಘದ ಸದಸ್ಯರಿಂದ ಯಕ್ಷಗಾನ ತಾಳಮದ್ದಳೆ ಜರುಗಿತು. ರಾತ್ರಿ ಶ್ರೀ ದೇವರಿಗೆ ವಿಶೇಷ ಕಾರ್ತಿಕ ಪೂಜೆ, ಅನ್ನ ಸಂತರ್ಪಣೆಯೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.