ಶ್ರೀ ದೇವಮ್ಮ, ಶ್ರೀ ಕಳಸದಮ್ಮ ದೇವಿ ರಥೋತ್ಸವ ಸಂಪನ್ನ

IMG-20240507-WA0347
Published on

ಅರಸಿಕೆರೆ ಗ್ರಾಮಾಂತರ: ತಾಲೂಕಿನ ಮುರುಂಡಿ ಗ್ರಾಮ ದೇವತೆ ಶ್ರೀ ದೇವಮ್ಮ ಮತ್ತು ಶ್ರೀ ಕಳಸದಮ್ಮ ದೇವಿ ಜಾತ್ರಾ ಮಹೋತ್ಸವ ಕಾರ್ಯಕ್ರಮಗಳು ಮೂರು ದಿನಗಳ ಕಾಲ ಬಹಳ ವಿಜೃಂಭಣೆಯಿಂದ ನಡೆದು ಮಂಗಳವಾರ ರಥೋತ್ಸವ ಸಂಪನ್ನಗೊಂಡಿತು.


ದೊಡ್ಡ ರಥದಲ್ಲಿ ಶ್ರೀ ದೇವಮ್ಮ, ಶ್ರೀ ಕಳಸದಮ್ಮ ದೇವಿ, ಮುದ್ದರಂಗನಹಳ್ಳಿ ಲಕ್ಕಮ್ಮ ದೇವಿ, ಕೆಂಚರಾಯ, ರಂಗನಾಥಸ್ವಾಮಿ, ಮಲ್ಲೇನಹಳ್ಳಿ ಅಮ್ಮನವರನ್ನು ಕೂರಿಸಲಾಯಿತು. ಶ್ರೀ ಜೇನುಕಲ್ ಸಿದ್ದೇಶ್ವರ ಸ್ವಾಮಿ, ಜವನಹಳ್ಳಿ ಶ್ರೀ ಜವರಲಿಂಗೇಶ್ವರ ಸ್ವಾಮಿ, ಲಕ್ಷ್ಮೀನರಸಿಂಹ ಸ್ವಾಮಿ ದೇವರುಗಳನ್ನು ಪ್ರತ್ಯೇಕ ರಥದಲ್ಲಿ ಕುಳ್ಳಿರಿಸಿ ರಥ ಎಳೆಯಲಾಯಿತು.


ನೆರೆದ ಭಕ್ತರೊಂದಿಗೆ ಸ್ವತಃ ಶ್ರೀ ಚಲುವರಾಯ ಸ್ವಾಮಿ ಹಾಗೂ ದೂತರಾಯ ಸ್ವಾಮಿ ಅವರು ರಥವನ್ನು ಎಳೆಯುವುದು ಇಲ್ಲಿನ ಮತ್ತೊಂದು ವಿಶೇಷ. ರಥೋತ್ಸವದ ನಂತರ ದಿವಂಗತ ಚನ್ನಬಸಪ್ಪರ ಕುಟುಂಬದಿಂದ ಸ್ವಾಮಿಯವರಿಗೆ ಉಯ್ಯಲೆ ಸೇವೆ ಮತ್ತು ಈಶ್ವರಚಾರ್ ಕುಟುಂಬದ ವತಿಯಿಂದ ವಸಂತ ಸೇವೆ ನಡೆಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net