ಶ್ರೀ ಚಿಕ್ಕರೇವಣಸಿದ್ಧ ಶಿವಶರಣ ಸ್ವಾಮೀಜಿ ಶಿವೈಕ್ಯ

Shri chikk Revanasidda shivasharana swamiji (3)
Published on

ಅಕ್ಕಲಕೋಟ: ಸೊಲ್ಲಾಪುರ ಜಿಲ್ಲೆಯ ಅಕ್ಕಲಕೋಟ ಪಟ್ಟಣದ ಹೆಸರಾಂತ ಜಗದ್ಗುರು ರೇವಣಸಿದ್ಧ ಶಿವಶರಣ ಮಠದ ೩ನೇ ಪೀಠಾಧಿಪತಿಗಳಾದ ಶ್ರೀ ಜಗದ್ಗುರು ಚಿಕ್ಕರೇವಣ ಶಿವಶರಣ ಸ್ವಾಮೀಜಿ ಅನಾರೋಗ್ಯದಿಂದ ಮಂಗಳವಾರ ಬೆಳಗ್ಗೆ ೯ಕ್ಕೆ ಬ್ರಹ್ಮಲೀನರಾಗಿದ್ದಾರೆ. ಬುಧವಾರ ೮.೩೦ ರಿಂದ ೧೨.೩೦ ರ ವೇಳೆ ಅಂತ್ಯವಿಧಿ ನೆರವೇರಲಿದೆ ಎಂದು ಶ್ರೀ ಮಠದ ವಿಶ್ವಸ್ಥ ಅಜಯ ನಿರೊಳಿ ತಿಳಿಸಿದ್ದಾರೆ.

ಕರ್ನಾಟಕದ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಹುಲ್ಯಾಳ ಗ್ರಾಮದಲ್ಲಿ ಮಲ್ಲಿಕಾರ್ಜುನ ಶಾಸ್ತಿ, ಅವ್ವಕ್ಕ ದಂಪತಿ ಉದರದಲ್ಲಿ ೧೯೫೮ ಅಕ್ಟೋಬರ್ ೧೦ರಂದು ಜನಿಸಿದ್ದರು. ಧಾರವಾಡದ ಕರ್ನಾಟಕ ವಿಶ್ವ ವಿದ್ಯಾಲಯದಲ್ಲಿ ಕನ್ನಡ ಎಂ.ಎ. ಪೂರ್ಣಗೊಳಿಸಿದ್ದಾರೆ.

೧೯೮೧ರಲ್ಲಿ ಅಕ್ಕಲಕೋಟದ ಶ್ರೀ ಜಗದ್ಗುರು ರೇವಣಸಿದ್ಧ ಶಿವಶರಣ ಮಠದ ೩ನೇ ಉತ್ತರಾಧಿಕಾರಿಯಾಗಿ ಪಟ್ಟಾಭಿಷೇಕ ಆಯಿತು. ಅಂದಿನಿಂದ ಇಂದಿನವರೆಗೆ ಸುಮಾರು ೪೨ ವರ್ಷ ಅಧ್ಯಾತ್ಮ ಕ್ಷೇತ್ರದಲ್ಲಿ ಮಹತ್ತರ ಸಾಧನೆ ಮಾಡುತ್ತಾ ಜಗದ್ಗುರು ದೇವರ ದಾಸಿಮಯ್ಯನವರ ಹಟಗಾರ ಸಮಾಜದ ಜಗದ್ಗುರುಗಳಾಗಿ ಅಗಾಧ ಕಾರ್ಯ ಮಾಡಿದ್ದಾರೆ.

ಶಿವಾದೈವತ ಭೂಷಣ, ಪಾದಯಾತ್ರಾ ಭೂಷಣ ಸೇರಿ ಹಲವು ಬಿರುದುಗಳನ್ನು ಪಡೆದು, ಭಕ್ತರ ಮನದಲ್ಲಿ ಸ್ಥಾನ ಪಡೆದಿದ್ದರು. ಪೀಠಾಧಿಪತಿಗಳಾದ ತಮ್ಮ ಅವಧಿಯಲ್ಲಿ ಸುಮಾರು ೫೨ ಮಠಗಳ ಕಾರ್ಯ ಏಕಕಾಲಕ್ಕೆ ನೋಡುತ್ತಿದ್ದರು.

ಮುಖ್ಯವಾಗಿ ಹುಬ್ಬಳ್ಳಿ, ಗುಳೇದಗುಡ್ಡ, ಸೊಲ್ಲಾಪುರ, ಗುಡದನಾಳ, ಚವಡಾಪುರ, ಲಕ್ಕಸಕೊಪ್ಪ, ಪುಲಸಗೇರಿ, ಮೈಂದರ್ಗಿ, ವಾಗದರಿ, ತೋಳನೂರು ಸೇರಿ ವಿವಿಧೆಡೆ ಮಠಗಳನ್ನು ಸ್ಥಾಪಿಸಿ, ಸಮಾಜಾಭಿಮುಖ ಕಾರ್ಯ ಮಾಡಿದ್ದಾರೆ.

ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ಕ್ಷೇತ್ರಗಳಲ್ಲಿ ಉತ್ತಮ ಕಾರ್ಯ ನಿರ್ವಹಿಸಿ ಹುಬ್ಬಳ್ಳಿಯಲ್ಲಿ ರೇವಣಸಿದ್ಧ ಶಿವಶರಣರ ಹೆಸರಲ್ಲಿ ಶಿಕ್ಷಣ ಸಂಸ್ಥೆ ಆರಂಭಿಸಿ, ಎಲ್‌ಕೆಜಿ ಇಂದ ಪಿಯುಸಿವರೆಗೂ ಶಿಕ್ಷಣ ನೀಡುತ್ತಿದ್ದಾರೆ. ಅಕ್ಕಲಕೋಟದ ಶ್ರೀ ಮಠದಲ್ಲಿ ಬಡ ವಿದ್ಯಾರ್ಥಿಗಳಿಗೆ ಊಟ ವಸತಿ ವ್ಯವಸ್ಥೆ ಮಾಡಿ ಸಾವಿರಾರು ಮಕ್ಕಳ ಶಿಕ್ಷಣಕ್ಕೆ ದಾರಿ ಮಾಡಿ ಕೊಟ್ಟು ಬಾಳಿಗೆ ಬೆಳಕಾಗಿದ್ದಾರೆ. ವಯಸ್ಸಿನ ೬೫ ವಯಸ್ಸಿಗೆ ಇಹಲೋಕ ತ್ಯಜಿಸಿದ್ದಾರೆರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net