ಆರೂಢ ಶ್ರೀ ವನದುರ್ಗಾ ದೇವಿ ಪ್ರತಿಷ್ಠಾಪನೆ

perana
ಆರೂಢದಲ್ಲಿ ಶ್ರೀ ವನದುರ್ಗಾ ದೇವಿಯ ಪ್ರತಿಷ್ಠಾಪನೆ ಭಾನುವಾರ ಬೆಳಗ್ಗೆ ಕೆಮ್ಮಿಂಜೆ ತಂತ್ರಿ ಸುಬ್ರಹ್ಮಣ್ಯ ಬಳ್ಳಕ್ಕುರಾಯ ಮಾರ್ಗದರ್ಶನದಲ್ಲಿ ಕಾಂಚನ ಪೆರ್ಲ ಶ್ರೀ ಷಣ್ಮುಖ ದೇವಸ್ಥಾನದ ಪ್ರಧಾನ ಅರ್ಚಕ ಶ್ರೀನಿವಾಸ ಬಡೆಕಿಲ್ಲಾಯರ ನೇತೃತ್ವದಲ್ಲಿ ನಡೆಯಿತು.
Published on

ನೆಲ್ಯಾಡಿ: ಗೋಳಿತ್ತೊಟ್ಟು ಗ್ರಾಮದ ಪೆರಣಬೈಲು ಅನಿಲದಲ್ಲಿ ನಿರ್ಮಿಸಿರುವ ಆರೂಢದಲ್ಲಿ ಶ್ರೀ ವನದುರ್ಗಾ ದೇವಿಯ ಪ್ರತಿಷ್ಠಾಪನೆ ಭಾನುವಾರ ಬೆಳಗ್ಗೆ ಕೆಮ್ಮಿಂಜೆ ತಂತ್ರಿ ಸುಬ್ರಹ್ಮಣ್ಯ ಬಳ್ಳಕ್ಕುರಾಯ ಮಾರ್ಗದರ್ಶನದಲ್ಲಿ ಕಾಂಚನ ಪೆರ್ಲ ಶ್ರೀ ಷಣ್ಮುಖ ದೇವಸ್ಥಾನದ ಪ್ರಧಾನ ಅರ್ಚಕ ಶ್ರೀನಿವಾಸ ಬಡೆಕಿಲ್ಲಾಯರ ನೇತೃತ್ವದಲ್ಲಿ ನಡೆಯಿತು.

ಶನಿವಾರ ದೇವತಾ ಪ್ರಾರ್ಥನೆ ಸೇರಿದಂತೆ ವಿವಿಧ ಧಾರ್ಮಿಕ ವಿಧಿವಿಧಾನ ನಡೆಯಿತು. ಭಾನುವಾರ ಬೆಳಗ್ಗೆ ಮಹಾಗಣಪತಿ ಹೋಮ, ಪ್ರತಿಷ್ಠಾಪನಾ ಪ್ರಧಾನ ಹೋಮ, ಪಂಚವಿಂಶತಿ ಕಲಶಾರಾಧನೆ ನಡೆಯಿತು. ಬಳಿಕ ಶ್ರೀ ವನದುರ್ಗಾ ದೇವಿಯ ಪದ್ಮಶಿಲಾ ಪ್ರತಿಷ್ಠಾಪನೆ, ಪ್ರತಿಷ್ಠಾಪನಾ ಕಲಶಾಭಿಷೇಕ, ಪಂಚಾಮೃತ ಅಭಿಷೇಕ, ಕಲಶಾಭಿಷೇಕ, ಪ್ರಸನ್ನ ಪೂಜೆ ನಡೆಯಿತು. ಮಧ್ಯಾಹ್ನ ಮಹಾ ಮಂಗಳಾರತಿ, ಪ್ರಸಾದ ವಿತರಣೆ ನಂತರ ಅನ್ನಸಂತರ್ಪಣೆ ನಡೆಯಿತು.

ನೋಣಯ್ಯ ಗೌಡ ಅನಿಲ, ಎ.ಎಸ್.ಶೇಖರ ಗೌಡ ಅನಿಲ, ಕುಶಾಲಪ್ಪ ಗೌಡ ಅನಿಲ, ವಿಶ್ವನಾಥ ಗೌಡ ಪೆರಣಗುತ್ತು, ವೆಂಕಪ್ಪ ಗೌಡ ಡೆಬ್ಬೇಲಿ, ನೋಣಯ್ಯ ಗೌಡ ಡೆಬ್ಬೇಲಿ, ಕಮಲಾಕ್ಷ ಪಂಡಿತ್, ಧರ್ಣಪ್ಪ ಗೌಡ ನಾವುಳೆ, ಗೋಪಾಲ ಗೌಡ ಕುದ್ಕೋಳಿ, ಪುರುಷೋತ್ತಮ ಗೌಡ ಕುದ್ಕೋಳಿ, ಭದ್ರಾವತಿ ಕಾಯರ್ತಡ್ಕ, ನಾರಾಯಣ ಗೌಡ ಅನಂತಾಡಿ, ಭಾರತಿ ಅನಂತಾಡಿ, ಯಶವಂತ ರೆಖ್ಯ, ಭಾಗೀರಥಿ ರೆಖ್ಯ, ಆಚಾರ್ಯ ಅನಿಲ, ಸತೀಶ್ ರೈ ಕೊಣಾಲುಗುತ್ತು, ರವಿಪ್ರಸಾದ್ ಶೆಟ್ಟಿ ರಾಮನಗರ, ರವಿಚಂದ್ರ ಹೊಸವೊಕ್ಕು, ರಾಧಾಕೃಷ್ಣ ಕೆರ್ನಡ್ಕ, ಸುಂದರ ಗೌಡ ಅತ್ರಿಜಾಲು ಅನಿಲ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net