ಶ್ರೀ ಶಾರದಾ ಯುವಕ ಮಂಡಲ ಸುವರ್ಣ ಮಹೋತ್ಸವ

Published on

ಬಂಟ್ವಾಳ: ಸಜೀಪಮುನ್ನೂರು ಗ್ರಾಮದ ಶ್ರೀ ಶಾರದಾ ಯುವಕ ಮಂಡಲ ಶಾರದಾ ನಗರ ಸುವರ್ಣ ಮಹೋತ್ಸವ ಕಾರ್ಯಕ್ರಮ ಆ.26 ರಿಂದ ಆ.28ರವರೆಗೆ ನಡೆಯಲಿದೆ ಎಂದು ಯುವಕ ಮಂಡಲದ ಅಧ್ಯಕ್ಷ ಪರಮೇಶ್ವರ ಶಾರದಾ ನಗರ ತಿಳಿಸಿದರು.

26ರಂದು ಬೆಳಗ್ಗೆ ಗಣಪತಿ ಹೋಮ ನಡೆದು ಸುವರ್ಣ ಮಹೋತ್ಸವದ ಉದ್ಘಾಟನೆ. 27ರಂದು ಬೆಳಗ್ಗೆ ಕೆಸರ್‌ದ ಗೊಬ್ಬು ಕ್ರೀಡಾಕೂಟ ಉದ್ಘಾಟನೆ ನಡೆಯಲಿದೆ. ಕೆಸರು ಗದ್ದೆಯಲ್ಲಿ ವಾಲಿಬಾಲ್, ಹಗ್ಗ ಜಗ್ಗಾಟ, ತ್ರೋಬಾಲ್, ಪಂದ್ಯಾಕೂಟ. ಸಂಜೆ ಸ್ಥಳೀಯ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ. 28ರಂದು ಸಂಜೆ 6ಕ್ಕೆ ಸಮಾರೋಪ ಸಮಾರಂಭ. ವಿವಿಧ ಸಾಧಕರಿಗೆ ಗೌರವ ಅರ್ಪಣೆ. 2023, 2024 ಸಾಲಿನ ಎಸ್ಸೆಸ್ಸೆಲ್ಸಿ ಹಾಗೂ ಪಿ.ಯು.ಸಿ ಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಅಭಿನಂದನೆ, ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ, ಮತ್ತಿತರ ಕಾರ್ಯಕ್ರಮ ನಡೆಯಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಗೌರವ ಅಧ್ಯಕ್ಷ ತಿಮ್ಮಪ್ಪ ಬೆಳ್ಳಾಡ, ಲೆಕ್ಕ ಪರಿಶೋಧಕ ವಿಜೇಶ್ ಕುಮಾರ್, ಕುಡಾರ್‌ಲಚ್ಚಿಲ್, ಪ್ರಸಾದ್ ಪೂಜಾರಿ ಕುಡಾರ್‌ಲಚ್ಚಿಲ್, ಸದಸ್ಯರಾದ ಶಿವಾನಂದ ಕುಡಾರ್‌ಲಚ್ಚಿಲ್ ಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net