ಸ್ಥಳೀಯ ಭಾಷೆಗಳ ಸಂರಕ್ಷಣೆಗೆ ಬದ್ಧ : ಪ್ರೊ.ವಿನ್ಸೆಂಟ್ ಮ್ಯಾಥ್ಯೂ ಕರೆ

seminar14
ಕೇರಳ ಸೆಂಟ್ರಲ್ ಯೂನಿವರ್ಸಿಟಿಯಲ್ಲಿ ಅಂತಾರಾಷ್ಟ್ರೀಯ ಸೆಮಿನಾರ್ ಅನ್ನು ಪ್ರಭಾರ ಉಪಕುಲಪತಿ ಪ್ರೊ.ವಿನ್ಸೆಂಟ್ ಮ್ಯಾಥ್ಯೂ ಉದ್ಘಾಟಿಸಿದರು. ಡಾ.ಎ.ಅಶೋಕ, ಪ್ರೊ.ವಾಸು ರಂಗನಾಥನ್ ಮೊದಲಾದವರಿದ್ದರು.
Published on

ಕಾಸರಗೋಡು: ಮಾಹಿತಿ ತಂತ್ರಜ್ಞಾನದ ಯುಗದಲ್ಲಿ ಸ್ಥಳೀಯ ಭಾಷೆಗಳ ಸಂರಕ್ಷಣೆಗೆ ಸಮಾಜ ಬದ್ಧವಾಗಿದೆ. ಕೃತಕ ಬುದ್ಧಿಮತ್ತೆಯ ಪ್ರಸ್ತುತ ಸನ್ನಿವೇಶದಲ್ಲಿ ಅದರ ಸಾಮರ್ಥ್ಯ ಬಳಸಿಕೊಳ್ಳುವ ಭರವಸೆ ಅಡಕವಾಗಿರುವುದಾಗಿ ಕೇರಳ ಕೇಂದ್ರೀಯ ವಿವಿ ಪ್ರಭಾರ ಉಪಕುಲಪತಿ ಪ್ರೊ.ವಿನ್ಸೆಂಟ್ ಮ್ಯಾಥ್ಯೂ ಹೇಳಿದರು.

ಕೇರಳದ ಕೇಂದ್ರೀಯ ವಿವಿ ಪೆರಿಯ ಕ್ಯಾಂಪಸ್‌ನಲ್ಲಿ ಕಣ್ಣೂರು ವಿವಿ ಬಹುಭಾಷಾ ಅಧ್ಯಯನ ಕೇಂದ್ರ ಮತ್ತು ನಾಟ್ಯರತ್ನಂ ಕಣ್ಣನ್ ಪಾಟಾಳಿ ಸ್ಮಾರಕ ಕಥಕ್ಕಳಿ ಟ್ರಸ್ಟ್ ಜಂಟಿಯಾಗಿ ಆಯೋಜಿಸಿದ ವಿಜ್ಞಾನ ಕುರಿತ ಅಂತಾರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು. ಕಣ್ಣೂರು ವಿವಿ ಸಿಂಡಿಕೇಟ್ ಸದಸ್ಯ ಡಾ.ಎ.ಅಶೋಕ ಅಧ್ಯಕ್ಷತೆ ವಹಿಸಿದ್ದರು.

ಪೆನ್ಸಿಲ್ವೇನಿಯಾ ವಿವಿಯ ಪ್ರೊ.ವಾಸು ರಂಗನಾಥನ್ ಪ್ರಧಾನ ಭಾಷಣ ಮಾಡಿದರು. ಭಾಷೆಗಳ ರಕ್ಷಣೆಗೆ ಸಂಬಂಧಿಸಿದ ಯೋಜನಾ ದಾಖಲೆಯನ್ನು ಉಪಕುಲಪತಿ ಹಾಗೂ ಸಿಂಡಿಕೇಟ್ ಸದಸ್ಯರಿಗೆ ಹಸ್ತಾಂತರಿಸಲಾಯಿತು. ಪ್ರೊ.ಉಮಾಮಹೇಶ್ವರ ರಾವ್, ಪ್ರೊ. ಜೋಸೆಫ್ ಕೋಯಿಪಲ್ಲಿ, ಡಾ.ರಿಜು ಮೋಲ್, ಡಾ.ಪಿ.ಕೆ.ಜಯರಾಜನ್, ಡಾ.ತೆನ್ನರಸು, ಡಾ.ಎ.ಎಂ.ಶ್ರೀಧರನ್ ಉಪಸ್ಥಿತರಿದ್ದರು. ನಂತರ ನಡೆದ ವಿವಿಧ ಗೋಷ್ಠಿಗಳಲ್ಲಿ ಪ್ರೊ.ಎಂ.ಸಿ ಕೇಶವಮೂರ್ತಿ, ಪ್ರೊ.ಆರ್.ಶರಣ್ಯ, ಪ್ರೊ.ಪ್ರಜಿತಾ ಪಿ, ಡಾ.ವಿ.ಬಾಲಕೃಷ್ಣನ್, ಡಾ. ಜಿ.ಪಳನಿ ರಾಜನ್, ಅನಿಲ್ ವಿ.ಕುಮಾರ್, ಸ್ಯಾನ್ ಜೋಸ್ ಜಾರ್ಜ್, ಅರೋಮಲ್, ಜೆಬಿ ಮರಿಯಮ್ ಕುರಿಯನ್, ವಿ.ಎಸ್. ಗೌರಿಶಂಕರಿ ಪ್ರಬಂಧ ಮಂಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net