

ಬಂಟ್ವಾಳ: ವಾಮದಪದವು ಶ್ರೀ ಶಾರದೋತ್ಸವ ಸಮಿತಿ ವತಿಯಿಂದ ಅಜ್ಜಿಬೆಟ್ಟು ಬಸದಿ ಸಭಾಂಗಣದಲ್ಲಿ 32ನೇ ವರ್ಷದ ಶ್ರೀ ಶಾರದಾ ಪೂಜಾ ಮಹೋತ್ಸವವು ಬುಧವಾರ ಸಂಜೆ ಸವಾಪನಗೊಂಡಿತು.
ಬುಧವಾರ ಬೆಳಗ್ಗೆ ಪ್ರತಿಷ್ಠೆಗೊಂಡು ಬಳಿಕ ಭಕ್ತಿ ಸಂಗೀತ ಮತ್ತು ಮಧ್ಯಾಹ್ನ ನಡೆದ ಮಹಾಪೂಜೆ ಮತ್ತು ಸಾರ್ವಜನಿಕ ಅನ್ನಸಂತರ್ಪಣೆಯಲ್ಲಿ ಅಪಾರ ಮಂದಿ ಭಕ್ತರು ಪಾಲ್ಗೊಂಡರು. ಇದೇ ವೇಳೆ ವಿದುಷಿ ವಿನುತಾ ಪ್ರವೀಣ್ ಗಟ್ಟಿ ಅವರ ಭರತಾಂಜಲಿ ನೃತ್ಯ ನಡೆಯಿತು. ನೃತ್ಯ ಭಜನೆ ಮತ್ತು ಮಹಾಪೂಜೆ ಬಳಿಕ ಸಂಜೆ ಆಕರ್ಷಕ ಶೋಭಾಯಾತ್ರೆ ನಡೆಯಿತು.
ವಾಜಿ ಸಚಿವ ಬಿ.ರವಾನಾಥ ರೈ, ಜಿಲ್ಲಾ ಪಂಚಾಯಿತಿ ವಾಜಿ ಸದಸ್ಯ ಚಂದ್ರಪ್ರಕಾಶ ಶೆಟ್ಟಿ, ಬೂಡ ಅಧ್ಯಕ್ಷ ಬೇಬಿ ಕುಂದರ್, ತಹಶೀಲ್ದಾರ್ ಅರ್ಚನಾ ಭಟ್ ಮತ್ತಿತರ ಗಣ್ಯರು ಭಾಗವಹಿಸಿದ್ದರು. ಸಮಿತಿ ಗೌರವಾಧ್ಯಕ್ಷ ಅಮ್ಮು ರೈ ಹರ್ಕಾಡಿ, ಅಧ್ಯಕ್ಷ ಜಯಚಂದ್ರ ಬೊಳ್ಮಾರು, ಪ್ರಮುಖರಾದ ನವೀನಚಂದ್ರ ಶೆಟ್ಟಿ, ಶ್ರೀಧರ ಪೈ, ಯೋಗೀಶ ಪ್ರಭು, ಯತೀಶ ಶೆಟ್ಟಿ, ಟಿ.ವರದರಾಜ ಪೈ, ಅರುಣ್ ಕುವಾರ್ ಇಂದ್ರ, ವಿವೇಕಾನಂದ ಪೂಜಾರಿ ಕೌಡೋಡಿ ಮತ್ತಿತರರಿದ್ದರು.