

ಕೋಟ: ಭಗವತ್ಪಾದ ಶ್ರೀ ಶಂಕರಾಚಾರ್ಯರ ಧರ್ಮ ನಿಷ್ಠೆ, ಶ್ರದ್ಧೆ, ಭಕ್ತಿ ಹಾಗೂ ಛಲ ಅನನ್ಯವಾದುದು ಎಂದು ಸಾಲಿಗ್ರಾಮ ಶ್ರೀ ಗುರು ನರಸಿಂಹ ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ಡಾ.ಕೆ.ಎಸ್. ಕಾರಂತ ಕರೆ ನೀಡಿದರು.
ಶ್ರೀ ಗುರು ನರಸಿಂಹ ದೇವಸ್ಥಾನ, ಬ್ರಾಹ್ಮಣ ಮಹಾಸಭಾ, ಸಾಲಿಗ್ರಾಮ ಹಾಗೂ ಉಡುಪಿ ಜಿಲ್ಲಾ ಶಾಂಕರತತ್ವ ಪ್ರಚಾರ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಶ್ರೀ ಶಂಕರ ಜಯಂತಿ ಉತ್ಸವಕ್ಕೆ ಚಾಲನೆ ನೀಡಿ ವಸಂತ ವೇದ ಶಿಬಿರದ ವಿದ್ಯಾರ್ಥಿಗಳು ಹಾಗೂ ಅವರ ರಕ್ಷಕರನ್ನು ಉದ್ದೇಶಿಸಿ ಮಾತನಾಡಿದರು.
ಸಾಲಿಗ್ರಾಮ ವಲಯ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಎಂ.ಶಿವರಾಮ ಉಡುಪ ಅಧ್ಯಕ್ಷತೆ ವಹಿಸಿದ್ದರು. ಉಡುಪಿ ಜಿಲ್ಲಾ ಶಂಕರತತ್ವ ಪ್ರಚಾರ ಸಮಿತಿ ಸಹ ಸಂಚಾಲಕಿ ಸವಿತಾ ಎರ್ಮಾಳ್ ಪ್ರಸ್ತಾವಿಸಿದರು. ಸೂರಾಲು ದೇವಿ ಪ್ರಸಾದ ತಂತ್ರಿ ಉಪನ್ಯಾಸ ನೀಡಿದರು. ಉಪಾಧ್ಯಕ್ಷ ಪಟ್ಟಾಭಿರಾಮ ಸೋಮಯಾಜಿ ಸ್ವಾಗತಿಸಿದರು. ಸಭಾ ಕಾರ್ಯದರ್ಶಿ ಕೆ.ರಾಜಾರಾಮ ಐತಾಳ ವಂದಿಸಿದರು.