ನರಸಿಂಹ ದೇವರ ಸ್ತುತಿಯಿಂದ ದುರಿತ ಪರಿಹಾರ : ಶ್ರೀ ವಿದ್ಯಾವಲ್ಲಭತೀರ್ಥ ಸ್ವಾಮೀಜಿ ಆಶೀರ್ವಚನ

kaniyooru shree
ಶ್ರೀ ವಿದ್ಯಾವಲ್ಲಭತೀರ್ಥ ಸ್ವಾಮೀಜಿ
Published on

ಕಡಬ: ದುರಿತಗಳನ್ನು ಪರಿಹರಿಸುವ ಶಕ್ತಿ ಶ್ರೀ ನರಸಿಂಹ ದೇವರಿಗೆ ಇದೆ. ಆದ್ದರಿಂದ ನಾವೆಲ್ಲರೂ ನರಸಿಂಹ ದೇವರ ಭಜನೆ, ಸ್ತುತಿ ಮಾಡಬೇಕು ಎಂದು ಕಾಣಿಯೂರು ಮಠಾಧೀಶರಾದ ಶ್ರೀ ವಿದ್ಯಾವಲ್ಲಭತೀರ್ಥ ಸ್ವಾಮೀಜಿ ಹೇಳಿದರು.

ಶ್ರೀ ಜಗದ್ಗುರು ಶ್ರೀ ಮನ್ಮಧ್ವಾಚಾರ್ಯ ಮೂಲ ಸಂಸ್ಥಾನಮ್ ಉಡುಪಿ, ಶ್ರೀ ಕಾಣಿಯೂರು ರಾಮತೀರ್ಥ ಮಠದಲ್ಲಿ ಗುರುವಾರ ಶ್ರೀ ನೃಸಿಂಹ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.

ಬಳಿಕ ಸ್ವಾಮೀಜಿ ಅವರಿಂದ ಮಂತ್ರಾಕ್ಷತೆ ನಡೆಯಿತು. ಕಾಣಿಯೂರು ಶ್ರೀ ಮಠದ ವ್ಯವಸ್ಥಾಪಕ ನಿರಂಜನ್ ಆಚಾರ್, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಭಕ್ತರು ಉಪಸ್ಥಿತರಿದ್ದರು. ಕಾಣಿಯೂರು ಗ್ರಾಪಂ ಮಾಜಿ ಅಧ್ಯಕ್ಷ ಪದ್ಮಯ್ಯ ಗೌಡ ಅನಿಲ ಕಾರ್ಯಕ್ರಮ ನಿರೂಪಿಸಿದರು.

ಕಾಣಿಯೂರು ಶ್ರೀ ಮಠದಲ್ಲಿ ನರಸಿಂಹ ಜಯಂತಿ ಪ್ರಯುಕ್ತ ವಿಶೇಷ ಪೂಜೆ, ಕಾಣಿಯೂರು ಮಠದ ಸಂಸ್ಥಾನ ದೇವರ ಪೂಜೆ, ಮಧ್ಯಾಹ್ನ ಮಹಾಪೂಜೆ, ಕಾಣಿಯೂರು ವಿಷ್ಣುಪ್ರಿಯ ಭಜನಾ ಮಂಡಳಿ ಸದಸ್ಯರಿಂದ ಭಜನೆ, ಸದಾನಂದ ಆಚಾರ್ಯ ಅಬೀರ ಅವರ ನಿರ್ದೇಶನದಲ್ಲಿ ಕಣ್ವಶ್ರೀ ಸಾಂಸ್ಕೃತಿಕ ಕಲಾ ಕೇಂದ್ರ ಕಾಣಿಯೂರು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ವೈಭವ ನಡೆಯಿತು. ಬಳಿಕ ಅನ್ನಸಂತರ್ಪಣೆ ನೆರವೇರಿತು.

ಸಾಧಕರಿಗೆ ಗೌರವಾರ್ಪಣೆ

ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪ್ರಶಾಂತ್ ಪಕ್ಕಳ ಮಲಾರ ಬೀಡು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ಮೇದಪ್ಪ ಗೌಡ ನಾವೂರು, ಪಾತ್ರಿಗಳಾದ ತಿಮ್ಮಪ್ಪ ಗೌಡ ಕಟ್ಟತ್ತಾರು, ಚೆನ್ನಪ್ಪ ಗೌಡ ಕುದ್ಕುಳಿ, ಈಶ್ವರ ಗೌಡ ಬೆದ್ರಂಗಳ, ಈಶ್ವರ ಗೌಡ ಕಟ್ಟತ್ತಾರು, ಸೇಷಪ್ಪ ಗೌಡ ಬರಮೇಲು, ಕಾಣಿಯೂರು ಕಣ್ವಶ್ರೀ ಸಾಂಸ್ಕೃತಿಕ ಕಲಾ ಕೇಂದ್ರದ ಸಂಚಾಲಕ ಸದಾನಂದ ಆಚಾರ್ಯ ಅಬೀರ, ಶ್ರೀ ವಿಷ್ಣುಪ್ರಿಯಾ ಭಜನಾ ಮಂಡಳಿ ಕಾಣಿಯೂರು ಸದಸ್ಯರನ್ನು ಕಾಣಿಯೂರು ಶ್ರೀ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿ ಸನ್ಮಾನಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net