

ವಿಜಯವಾಣಿ ಸುದ್ದಿಜಾಲ ಕೋಟ
ದೈವ, ದೇವರನು ಕಾಟಾಚಾರಕ್ಕೆ ನಂಬುವ ಪರಿಪಾಠ ಒಳ್ಳೆದಲ್ಲ. ಯಾವುದೋ ಉದ್ದೇಶದಿಂದ ದೇವಳಕ್ಕೆ ಹೋಗಿ, ವ್ಯವಹಾರಿಕ ತಾಣವಾಗಿಸದೆ ದೃಢಭಕ್ತಿಯಿಂದ ದೇವರ ಧ್ಯಾನ ಮಾಡಬೇಕು. ಆಗ ದೇವರು ನಮ್ಮ ಇಷ್ಟಾರ್ಥಕ್ಕೆ ಸ್ಪಂದಿಸಿ ಆರೋಗ್ಯವಂತ ಸಮಾಜ ನಿರ್ಮಾಣ ಸಾಧ್ಯ ಎಂದು ಪಾಂಡೇಶ್ವರ ಯೋಗ ಗುರುಕುಲದ ಮುಖ್ಯಸ್ಥ ವಿದ್ವಾನ್ ಡಾ.ವಿಜಯ್ ಮಂಜರ್ ಹೇಳಿದರು.
ಶ್ರೀ ಕ್ಷೇತ್ರ ಕಳಿಬೈಲು ತುಳಸಿ ಅಮ್ಮ, ಶಿರಸಿ ಮಾರಿಕಾಂಬೆ, ಪಂಜುರ್ಲಿ ಮತ್ತು ಸ್ವಾಮಿ ಕೊರಗಜ್ಜ ಸಪರಿವಾರ ದೇವಸ್ಥಾನದಲ್ಲಿ ಕಳಿಬೈಲು ನೇಮೋತ್ಸವ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದರು.
ಪಾಂಡೇಶ್ವರದ ಕಳಿಬೈಲು ಭಕ್ತರ ಇಷ್ಟಾರ್ಥ ಈಡೇರಿಸುವ ತಾಣವಾಗಿದೆ. ಎಲ್ಲಿ ಯಾವ ಕಾಲಕ್ಕೆ ದೈವದೇವರು ಅವತರಿಸಬೇಕೋ ಅದೇ ಸಂದರ್ಭಕ್ಕೆ ಕೆಲವ್ಯಕ್ತಿಗಳ ಮೂಲಕ ಆ ಶಕ್ತಿ ಹೊರಜಗತ್ತಿಗೆ ಪಸರಿಸಿಕೊಳ್ಳುತ್ತದೆ ಎಂದರು.
ಶ್ರೀಕ್ಷೇತ್ರದ ಮುಖ್ಯಸ್ಥ ಎಂ.ಸಿ.ಚಂದ್ರಶೇಖರ್ ಅಧ್ಯಕ್ಷತೆ ವಹಿಸಿದ್ದರು. ಐರೋಡಿ ಮಹಾಕಾಳಿ ದೇಗುಲದ ಅಧ್ಯಕ್ಷ ಐರೋಡಿ ವಿಠ್ಠಲ ಪೂಜಾರಿ, ಬ್ರಹ್ಮಾವರ ತಾಪಂ ಮಾಜಿ ಅಧ್ಯಕ್ಷೆ ಜ್ಯೋತಿ ಉದಯ್ ಕುಮಾರ್, ಉಡುಪಿ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಪೃಥ್ವಿರಾಜ್ ಶೆಟ್ಟಿ, ವಿದ್ಯುತ್ ಗುತ್ತಿಗೆದಾರ ದಯಾನಂದ ಪೂಜಾರಿ, ಶ್ರೀ ಕ್ಷೇತ್ರದ ಪಾತ್ರಿಗಳಾದ ನವೀನ್, ಗೌರವ ಸಲಹೆಗಾರ ಶಶಿಧರ ರಾವ್, ಬೆಣ್ಣೆಕುದ್ರು ಉದ್ಯಮಿ ಸತೀಶ್ ಪೂಜಾರಿ, ಪಾಂಡೇಶ್ವರ ಪಂಚಾಯಿತಿ ಸದಸ್ಯ ರವೀಶ್ ಶ್ರೀಯಾನ್, ವಿಠ್ಠಲ ಪಾತ್ರಿ, ಕಂಬಿಗಾರ ಶ್ರೀ ಬಬ್ಬುಸ್ವಾಮಿ ದೈವಸ್ಥಾನ ಮಟಪಾಡಿ ಮೊಕ್ತೇಸರ ವಿಶ್ವನಾಥ ಶೆಟ್ಟಿ, ರಮೇಶ್ ಭಟ್, ರೈಲ್ವೆ ಇಲಾಖೆ ಇಂಜಿನಿಯರ್ ಶರೀತಾ ವಿಕಾಸ್ ಕುಮಾರ್ ಉಪಸ್ಥಿತರಿದ್ದರು.
ಪ್ರಧಾನ ಅರ್ಚಕ ಅಭಿಜಿತ್ ಪಾಂಡೇಶ್ವರ ಸ್ವಾಗತಿಸಿ ಪ್ರಾಸ್ತಾವನೆ ಸಲ್ಲಿಸಿದರು. ದೈಹಿಕ ಶಿಕ್ಷಕ ಸತೀಶ್ಚಂದ್ರ ಶೆಟ್ಟಿ, ಮಂಜುನಾಥ ಹಿಲಿಯಾಣ ಕಾರ್ಯಕ್ರಮ ನಿರೂಪಿಸಿದರು. ನಿರೂಪಕ ಶ್ರೀಶ ಆಚಾರ್ ವಂದಿಸಿದರು.
ಕಳಿಬೈಲು ಕಂಬಳರತ್ನ ಪುರಸ್ಕಾರವನ್ನು ಬಿ.ಶಾಂತಾರಾಮ್ ಶೆಟ್ಟಿ, ಸಹಕಾರರತ್ನ ಪುರಸ್ಕಾರವನ್ನು ಜಾರ್ಜ್ ಎಸ್.ಫರ್ನಾಂಡಿಸ್, ಜೀವರಕ್ಷಕ ಪುರಸ್ಕಾರವನ್ನು ಈಶ್ವರ ಮಲ್ಪೆ, ಭಜನಾಸೇವಾ ಪುರಸ್ಕಾರವನ್ನು ವಾಸುದೇವ ಹಂಗಾರಕಟ್ಟೆ, ರಂಗರತ್ನ ಪುರಸ್ಕಾರವನ್ನು ಸುಜಾತಾ ಅಲ್ವಿನ್ ಆಂದ್ರಾದೆ ದಂಪತಿಗೆ ನೀಡಲಾಯಿತು. ಕಳಿಬೈಲ್ ಕಿಂಗ್ ಕುಟ್ಟಿ ಕಂಬಳದ ಶ್ರೇಷ್ಠ ಒಟದ ಕೋಣ ಬಾರ್ಕೂರು ಕುಟ್ಟಿಗೆ ವಿಶೇಷ ಪುರಸ್ಕಾರ ನೀಡಲಾಯಿತು.