ಸಾಧನೆ ಯಶಸ್ಸಿನ ಕೊನೆ ಅಲ್ಲ : ಶ್ರೀಗುರು ಕಾಲೇಜು ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಪೊಲೀಸ್ ಆಯುಕ್ತ ಡಾ.ಶರಣಪ್ಪ ಅಭಿಮತ

0507KLb06
Published on

ಯುಪಿಎಸ್‌ಸಿ. ಪರೀಕ್ಷೆಯಲ್ಲಿ ೯೮೪ನೇ ರ‍್ಯಾಂಕ್ ಪಡೆದ ಶ್ರೀ ಗುರು ಕಾಲೇಜಿನ ಹಳೆಯ ವಿದ್ಯಾರ್ಥಿ ಮೋಹನ ಸಂಗಪ್ಪ ಪಾಟೀಲ್‌ರಿಗೆ ವಿಶೇಷ ಸನ್ಮಾನ

ವಿಜಯವಾಣಿ ಸುದ್ದಿಜಾಲ ಕಲಬುರಗಿ

ನಿರಂತರ ಪರಿಶ್ರಮದಿಂದ ಮಾಡುವ ಸಾಧನೆ ಯಶಸ್ವಿ ಕೊನೆ ಅಲ್ಲ. ಇನ್ನಷ್ಟು ಸಾಧನೆ ಮಾಡಲು ಪ್ರಯತ್ನಗಳನ್ನು ನಿರಂತರವಾಗಿ ಮುಂದುವರೆಸಬೇಕು.ಆಗಲೇ ಜೀವನದಲ್ಲಿ ಅಸಾಮಾನ್ಯರಾಗಲು,ಮಹತ್ವದನ್ನು ಸಾಧಿಸಲು ಸಾಧ್ಯವಾಗುತ್ತದೆ ಎಂದು ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ ಕಿವಿಮಾತು ಹೇಳಿದರು.

ನಗರದ ಜೇವರ್ಗಿ ರಸ್ತೆಯಲ್ಲಿರುವ ನೀಲಾಂಬಿಕಾ ಕಲ್ಯಾಣ ಮಂಟಪದಲ್ಲಿ ಶನಿವಾರ ಶ್ರೀಗುರು ಸ್ವತಂತ್ರ ಪಿಯು ಕಾಲೇಜಿನ ಪ್ರತಿಭಾ ಪುರಸ್ಕಾರ-೨೦೨೫ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತೋಶ್ರೀ ಕಲ್ಯಾಣಿ ನಾಯ್ಕ ಹಾಗೂ ಎ.ವೈ.ನಾಯ್ಕ ಅವರ ಭಾವಚಿತ್ರಕ್ಕೆ ಪುಷ್ಪ ಅರ್ಪಿಸಿ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಗುರಿಯನ್ನು ಇಟ್ಟುಕೊಂಡು ಮುಂದೆ ಸಾಗಬೇಕು. ಆಗ ಹೊಸದನ್ನು ಕಂಡುಕೊಳ್ಳಲು ಸಾಧ್ಯವಾಗುತ್ತದೆ ಎಂದರು.

ಶ್ರೀ ಗುರು ಕಾಲೇಜಿನಲ್ಲಿ ಎರಡು ದಶಕಗಳಲ್ಲಿ ೧೦ ಸಾವಿರ ವಿದ್ಯಾರ್ಥಿಗಳು ಅಧ್ಯಯನ ಮಾಡಿದ್ದು, ಈಗ ಅವರೆಲ್ಲರು ದೇಶ- ವಿದೇಶಗಳಲ್ಲಿ ಹಲವಾರು ಕ್ಷೇತ್ರದಲ್ಲಿ ಸಾಧನೆ ಮಾಡು ಸೇವೆ ಸಲ್ಲಿಸುತ್ತಿz್ದÁರೆ.ಸಾಧನೆ ಪ್ರೋ.ಎ.ವೈ.ನಾಯ್ಕ ಹಾಗೂ ಶಿಕ್ಷಕರ ಪರಿಶ್ರಮವಿದೆ. ಅದನ್ನು ನಿರಂತರ ಪ್ರಯತ್ನವಾಗಿರಿಸುವ ಮೂಲಕ ಹೊಸ ಪೀಳಿಗೆಯನ್ನು ಉತ್ತುಂಗಕ್ಕೆ ಕರೆದುಕೊಂಡು ಹೋಗುವಂತ ಕಾರ್ಯವಾಗಬೇಕು. ಜತೆಗೆ ವಿದ್ಯಾರ್ಥಿಗಳು ಸರ್ಕಾರ ನೀಡುವ ವಿದ್ಯಾರ್ಥಿ ವೇತನ ಸದುಪಯೋಗ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ವಿದ್ಯಾರ್ಥಿಗಳು ಜೀವನದಲ್ಲಿ ಶಿಸ್ತು ಬದ್ಧತೆ-ಶ್ರಮ ವಹಿಸಿ ಅಭ್ಯಾಸ ಮಾಡಿದರೆ ಯಶಸ್ಸು ಖಂಡಿತ. ಸಾಧಿಸುವ ಛಲವಿಸಿಕೊಂಡು ಮುನ್ನುಗ್ಗುವಂತೆ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ತಮ್ಮ ಕಾಲೇಜಿನ ದಿನ ಹಾಗೂ ಐಪಿಎಸ್ ಪರೀಕ್ಷೆಯಲ್ಲಿ ಸಫಲರಾಗಿರುವುದರ ಹಿಂದಿನ ಪರಿಶ್ರಮದ ನೆನಪಿನ ಬುತ್ತಿ ಬಿಚ್ಚಿಡುವ ಮೂಲಕ ವಿದ್ಯಾರ್ಥಿಗಳಿಗೆ ಸ್ಪೂರ್ತಿ ತುಂಬಿದರು.

ಯುಪಿಎಸ್‌ಸಿ. ಪರೀಕ್ಷೆಯಲ್ಲಿ ೯೮೪ನೇ ರ‍್ಯಾಂಕ್ ಪಡೆದಿರುವ ಶ್ರೀ ಗುರು ಕಾಲೇಜಿನ ಹಳೆಯ ವಿದ್ಯಾರ್ಥಿ ಮೋಹನ ಸಂಗಪ್ಪ ಪಾಟೀಲ್‌ರು ವಿಶೇಷ ಸನ್ಮಾನ ಸ್ವೀಕರಿಸಿ, ಸಾಧನೆಗೆ ಪ್ರೋ.ಎ.ವೈ.ನಾಯ್ಕ ಅವರ ಆದರ್ಶ,ಗುರುಗಳ ಮಾರ್ಗದರ್ಶನ ಕಾರಣವಾಗಿದೆ. ಎಲ್ಲರು ಶ್ರದ್ಧೆಯಿಂದ ಓದಿ ಸಾಧನೆ ಮಾಡಲು ತಿಳಿಸಿದರು.

ಪ್ರಾಂಶುಪಾಲ ವಿದ್ಯಾಸಾಗರ ಗೋಗಿ ಮಾತನಾಡಿ, ಅದೃಷ್ಟದ ಮೇಲೆ ನಂಬಿಕೆ ಇಡಬೇಡಿ, ಕಠಿಣ ಶ್ರಮದ ಮೇಲೆ ವಿಶ್ವಾಸವಿಡಿ, ಆಗ ಖಂಡಿತವಾಗಿಯೂ ಯಶಸ್ಸು ಸಿಗುತ್ತದೆ ಎಂದರು. ಸಂಸ್ಥೆ ಅಧ್ಯಕ್ಷೆ ನಳಿನಿ ನಾಯ್ಕ, ಹಿತೈಷಿ ಗುರುರಾಜ ಹರವಾಳಕರ್ ಮಾತನಾಡಿ, ನಾಯ್ಕ ಅವರು ಸರ್ಕಾರಿ ಕಾಲೇಜಿನಲ್ಲಿ ಉಪನ್ಯಾಸಕರಿದ್ದಾಗಲೇ ಕಾಲೇಜು ಸ್ಥಾಪಿಸುವ ಕನಸು ಕಂಡಿದ್ದರು ಎಂದು ಸ್ಮರಿಸಿದರು.

ಸಂಸ್ಥೆಯ ಕಾರ್ಯದರ್ಶಿ ನಿತಿನ್‌ನಾಯ್ಕ, ಆಡಳಿತಾಧಿಕಾರಿ ನೇಹಾ ನಿತೀನ್ ನಾಯ್ಕ, ಆಡಳಿತ ಮಂಡಳಿಯ ಸದಸ್ಯ ಗುರುರಾಜ ನಾಯ್ಕ, ಭೋಧಕರು, ಸಿಬ್ಬಂದಿ,ವಿದ್ಯಾರ್ಥಿಗಳು, ಪಾಲಕರು ಪಾಲ್ಗೊಂಡಿದ್ದರು. ಬಳಿಕ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು. ಪ್ರಥಮ ವರ್ಷದ ವಿದ್ಯಾರ್ಥಿಗಳನ್ನು ಸ್ವಾಗತಿಸಲಾಯಿತು.

ಚಿನ್ನದುಂಗರ ತೊಡಿಸಿ ಲಕ್ಷ ರೂ.ನೀಡಿ ಸನ್ಮಾನ

ಸಮಾರಂಭದಲ್ಲಿ ದ್ವಿತೀಯ ಪಿಯುಸಿಯಲ್ಲಿ ಜಿಲ್ಲೆಗೆ ೨ನೇ ಸ್ಥಾನ ಪಡೆದ ಹಮೀದಾ ಉಮೈಝಾ ತಹಸೀನ್ ಲಕ್ಷ ರೂ.ನಗದು ಹಾಗೂ ದ್ವಿತೀಯ ಸ್ಥಾನ ಪಡೆದ ನಜೀಬುರ ರೆಹಮಾನ್‌ಗೆ ಚಿನ್ನದ ಉಂಗುರ ತೊಡಗಿಸಿ ಪುರಸ್ಕಾರ ನೀಡಿ ಪೋಷಕರೊಂದಿಗೆ ಗೌರವಿಸಲಾಯಿತು.

ನೀಟ್ ಪರೀಕ್ಷೆಯಲ್ಲಿ ೫೫೧ ಅಂಕ ಪಡೆದ ಮಿಸಲೆರುಬಾ ಇಫಾತ್‌ಗೆ ೨೫ ಸಾ.ರೂ. ದ್ವಿತೀಯ ಪಿಯುಸಿಯಲ್ಲಿ ೫೮೬ ಅಂಕ ಪಡೆದ ಹರ್ಷಿತಾ ರಾಜೇಶ ಅಲ್ಲಿಪುರಗೆ ೨೦ ಸಾ.ರೂ.,೫೭೫ ಅಂಕ ಪಡೆದ ಭೀಮಾಶಂಕರಗೆ ೧೫ ಸಾ.ರೂ. ನಗದು ಪುರಸ್ಕಾರ ನೀಡಲಾಯಿತು. ಜೆಇಇ ಅಡ್ವಾನ್ಸ್ ಪರೀಕ್ಷೆಯಲ್ಲಿ ೧೪೧೮ನೇ ಸ್ಥಾನ ಪಡೆದ ವಿನಾಯಕ ಆರ್ ಹಾಗೂ ಮೇನ್ಸ್ನಲ್ಲಿ ಉನ್ನತ ರ‍್ಯಾಂಕ ಪಡೆದ ಮಂಜುನಾಥ ಎಚ್ ಅವರಿಗೆ ತಲಾ ೧೦ ಸಾ.ರೂ. ನಗದು ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.

ಪ್ರಥಮ ಪಿಯುಸಿಯಲ್ಲಿ ಪ್ರಥಮ ಸ್ಥಾನ ಪಡೆದ ಅರ್ಚನಾ ಚೌಧರಿಗೆ ೨೦ ಸಾ.ರೂ.,ದ್ವಿತೀಯ ಸ್ಥಾನ ಪಡೆದ ರಘುವೀರ ರವಿ ಪಾಟೀಲಗೆ ೧೫ ಸಾ.ರೂ., ತೃತೀಯ ಸ್ಥಾನ ಪಡೆದ ಚೈತ್ರಾ ಶರಣಪ್ಪ ೧೦ ಸಾ.ರೂ. ನಗದು ಪುರಸ್ಕಾರ ನೀಡÀಲಾಯಿತು.ವಿವಿಧ ಪರೀಕ್ಷೆಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೂ ಸೇರಿದಂತೆ ಒಟ್ಟು ೬.೯೦ ಲಕ್ಷ ರೂ. ವಿತರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net