ಜಪಯಜ್ಞದಲ್ಲಿ ಶ್ರೀ ಚಕ್ರಪೂಜೆ : ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಉಪಸ್ಥಿತಿ

New Project (12)
Published on

ಕಾಸರಗೋಡು: ನಗರದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ನಡೆಯುತ್ತಿರುವ ಕೋಟಿ ಪಂಚಾಕ್ಷರಿ ಜಪಯಜ್ಞದಲ್ಲಿ ಬುಧವಾರ ಶ್ರೀ ಚಕ್ರಪೂಜೆ ನೆರವೇರಿತು. ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ದೇವಸ್ಥಾನಕ್ಕೆ ಭೇಟಿ ನೀಡಿ ಕೋಟಿ ಪಂಚಾಕ್ಷರಿ ಜಪಯಜ್ಞದಲ್ಲಿ ಪಾಲ್ಗೊಂಡು ಆಶೀರ್ವಚನ ನೀಡಿದರು. ಕ್ಷೇತ್ರದ ಟ್ರಸ್ಟ್ ಬೊರ್ಡ್ ಅಧ್ಯಕ್ಷ ವಕೀಲ ಗೋವಿಂದನ್ ನಾಯರ್, ಕೋಟಿ ಪಂಚಾಕ್ಷರಿ ಜಪಯಜ್ಞ ಸಮಿತಿ ಕಾರ್ಯಾಧ್ಯಕ್ಷ ಡಾ.ಕೆ.ಎನ್ ವೆಂಕಟ್ರಮಣ ಹೊಳ್ಳ, ಹೋಟೆಲ್ ಉದ್ಯಮಿ ರಾಮ್ ಪ್ರಸಾದ್, ಉಪಾಧ್ಯಕ್ಷ ಅರ್ಜುನ್ ತಾಯಲಂಗಾಡಿ, ಪ್ರಧಾನ ಕಾರ್ಯದರ್ಶಿ ಹರೀಶ್ ಕೆ.ಆರ್.ಮೊದಲದವರು ಉಪಸ್ಥಿತರಿದ್ದರು. ಡಿ.16ರಂದು ಆರಂಭಗೊಂಡ ಕೋಟಿ ಪಂಚಾಕ್ಷರಿ ಜಪಯಜ್ಞದಲ್ಲಿ 90 ಲಕ್ಷಕ್ಕೂ ಮಿಕ್ಕಿ ಸಮಿಧೆ ಸಮರ್ಪಿಸಲಾಗಿದೆ.

ಇಂದು ಸಂಪನ್ನ : ಕೋಟಿ ಪಂಚಾಕ್ಷರಿ ಜಪಯಜ್ಞ ಡಿ.19ರಂದು ರುದ್ರಹೋಮ ಪೂರ್ಣಾಹುತಿಯೊಂದಿಗೆ ಸಂಪನ್ನಗೊಳ್ಳಲಿದೆ. ಬೆಳಗ್ಗೆ ಶ್ರೀ ರುದ್ರಹೋಮ ಆರಂಭಗೊಳ್ಳಲಿದ್ದು, ಅಪರಾಹ್ನ ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಅವರ ಉಪಸ್ಥಿತಿಯಲ್ಲಿ ಸಂಪನ್ನಗೊಳ್ಳಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net