ಅಧಿಕಮಾಸ ಸಂಪನ್ನ, ಸಂಭ್ರಮದ ಶ್ರಾವಣ ಶುರು : ಅಪ್ಪನ ಗುಡಿಯಲ್ಲಿ ಸಂಭ್ರಮ ಭಕ್ತರ ದಂಡು

IMG-20230817-WA0002
Published on

ಶರಣಬಸವೇಶ್ವರರ ದೇವಸ್ಥಾನಕ್ಕೆ ಆಗಮಿಸಿ ದರ್ಶನ ಪಡೆದ ಭಕ್ತರು * ನಿರಂತರ ಒಂದು ತಿಂಗಳು ಧಾರ್ಮಿಕ ಕಾರ್ಯಕ್ರಮ : ಪಾದಯಾತ್ರೆ

ವಿಜಯವಾಣಿ ಸುದ್ದಿಜಾಲ ಕಲಬುರಗಿ
ಕಳೆದ ಒಂದು ತಿಂಗಳು ಅಧಿಕ ಮಾಸದಲ್ಲಿ ಧಾರ್ಮಿಕ ಕಾರ್ಯಗಳು ನಡೆದು ಮಂಗಳವಾರ ಸಮಾರೋಪಗೊಡಿತು. ಜತೆಗೆ ಶುಕ್ರವಾರದಿಂದ ಶ್ರಾವಣ ಮಾಸದ ವೈಭದ ಆರಂಭವಾಗಲಿದೆ. ಶ್ರಾವಣದಲ್ಲಿ ನಗರ ಸೇರಿ ಜಿಲ್ಲೆಯಾದ್ಯಂತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಪುರಾಣ, ಪ್ರವಚನ, ವಚನ ಸಾಹಿತ್ಯಕುರಿತು ಉಪನ್ಯಾಸ ಒಂದು ತಿಂಗಳ ಪರ್ಯಂತ ನಡೆಯಲಿವೆ.  ಪರಮಾತ್ಮನ ನಾಮಸ್ಮರಣೆ ಶ್ರವಣ ಮಾಡುವ ಮಾಸವಿದು.
ಉತ್ತರ ಕರ್ನಾಟಕದ ಆರಾಧ್ಯ ದೈವ ಶ್ರೀ ಶರಣಬಸವೇಶ್ವರ ಸಂಸ್ಥಾನದಲ್ಲಿ  ನಿರಂತರ ಒಂದು ತಿಂಗಳು ಹಲುವು, ಹತ್ತು ಕಾರ್ಯಕ್ರಮಗಳು ನಡೆಯುತ್ತಿವೆ. ನಿತ್ಯ ನಸುಕಿನ ಜಾವದಲ್ಲಿ ಭಕ್ತರು ಕಾಲ್ನಡಿಗೆ ಮೂಲಕ ಶರಣಬಸವೇಶ್ವರ ಮಂದಿರಕ್ಕೆ ಆಗಮಿಸಿ ದರ್ಶನ ಪಡದು ಪೂಜೆ ಸಲ್ಲಿಸುತ್ತಾರೆ. ಜಿ¯್ಲೆ ಸೇರಿ ರಾಯಚೂರು, ಕೊಪ್ಪಳ, ಬಳ್ಳಾರಿ, ಯಾದಗಿರಿ, ವಿಜಯಪುರ, ಬಾಗಲಕೋಟ್, ಬೀದರ್ ಜಿ¯್ಲÉಯ ಭಕ್ತರು ಪಾದಯಾತ್ರೆ ಮೂಲಕ ಕಲಬುರಗಿಗೆ ಆಗಮಿಸಿ ಶರಣನ ದರ್ಶನ ಪಡೆದುಕೊಳ್ಳಿತ್ತಾರೆ.
ಅಖಿಲ ಭಾರತ ಶಿವಾನುಭವ ಮಂಟಪ, ಪೂಜ್ಯ ಡಾ.ಶರಣಬಸವಪ್ಪ ಅಪ್ಪ ಫ್ಯಾಮಿಲಿ ಟ್ರಸ್ಟ್ ಹಾಗೂ ಶ್ರೀ ಶರಣಬಸವೇಶ್ವರ ಸಂಸ್ಥಾನದ ಆಶ್ರಯದಲ್ಲಿ ಸಂಸ್ಥಾನದ ೮ನೇ ಪೀಠಾಧಿಪತಿ ಪೂಜ್ಯ ಡಾ.ಶರಣಬಸವಪ್ಪ ಅಪ್ಪ ಅವರ ೪೦ನೇ ಪೀಠಾರೋಹಣ ನಿಮಿತ್ತ ೪೦ ದಿನಗಳವರೆಗೆ ಶಿವಾನುಭವ ಗೋಷ್ಠಿ ಆಯೋಜಿಸಲಾಗಿದೆ. ಶ್ರಾವಣಮಾಸದಲ್ಲಿ ನಿತ್ಯ ಸಂಜೆ ೬ರಿಂದ ೭ರ ವರೆಗೆ ಪ್ರೊ.ರೇವಯ್ಯ ವಸ್ತçದಮಠ್, ಕವಿತಾ ಪಾಟೀಲ್, ಷಣ್ಮುಖ ಪಾಟೀಲ್, ಡಾ. ಎಂ.ಎಸ್.ಪಾಟೀಲ್,  ಸಚಿನ್ ಜಾಧವ್, ರೋಮಿತ್ ಕಮಲಾಪುರಕರ್ ಅವರಿಂದ ಸಂಗೀತ ಕಾರ್ಯಕ್ರಮ ಜರುಗಲಿದೆ. ಸಂಜೆ ೭ರಿಂದ ೮ರ ವರೆಗೆ ಶಿವಲಿಂಗ ಶಾಸ್ತಿçà ಗರೂರ್ ಅವರಿಂದ ಶರಣಬಸವೇಶ್ವರರ ಪುರಾಣ ಜರುಗಲಿದೆ. ನಿತ್ಯ  ಒಬ್ಬ ವಿದ್ವಾಂಸರಿAದ ಉಪನ್ಯಾಸ ನಡೆಯಲಿದೆ.
ಪೂಜ್ಯ ಡಾ.ಶರಣಬಸವಪ್ಪ ಅಪ್ಪ ಅವರು ಸಂಸ್ಥಾನದ ಪೀಠಾಧಿಪತಿಯಾಗಿ ೪೦ ವರ್ಷ ಪೂರೈಸಿದ ನಿಮಿತ್ತ ೪೦ ದಿನಗಳವರೆಗೆ ಶರಣರು, ಮಹಾನ್ ಪುರುಷರು ಹಾಗೂ ಡಾ.ಶರಣಬಸವಪ್ಪ ಅಪ್ಪ ಅವರ ಸಾಂಸ್ಕೃತಿಕ ಕೊಡುಗೆ ಕುರಿತು ಉಪನ್ಯಾಸ ಕಾರ್ಯಕ್ರಮ ಆಯೋಜಿಸಲಾಗಿದೆ. ಶ್ರಾವಣಮಾಸದಲ್ಲಿ ಸುಮಾರು ಒಂದು ಲP್ಷÀಕ್ಕಿಂತ ಹೆಚ್ಚು ಭಕ್ತರು ಶರಣನ ದರ್ಶನ ಪಡೆಯುವ ನಿರೀಕ್ಷೆ ಇದೆ. ಭಕ ್ತರಿಗೆ ದಾಸೋಹ ಮಹಾಮನೆಯಲ್ಲಿ ಸಂಸ್ಥಾನದಿAದ ಪ್ರಸಾದ ವ್ಯವಸ್ಥೆ ಮಾಡಲಾಗುತ್ತದೆ. ಪ್ರತಿ ಸೋಮವಾರ ಅಪಾರ ಭಕ್ತರನ ಮಧ್ಯೆ ಪಲ್ಲಕ್ಕಿ ಉತ್ಸವ ಜರುಗಲಿದೆ.
ಅನೇಕ ಮಠ ಮಂದಿರದಲ್ಲಿ ಶ್ರಾವಣ ಮಾಸದಲ್ಲಿ ವಿವಿಧ ಕಾರ್ಯಕ್ರಮಗಳು ನಡೆಯುತ್ತವೆ. ಮನೆಮನೆಯಲ್ಲಿ ಉಪನ್ಯಾಸ, ಜಿ¯್ಲÉಯ ವಿವಿಧ ಕಡೆಗಳಲ್ಲಿ ಶ್ರೀ ಶರಣಬಸವೇಶ್ವರರ ಹಾಗೂ ವಿವಿಧ ಮಹಾಪುರುಷರ ಪುರಾಣ ನಡೆಯುತ್ತದೆ. ಕಲಾವಿದರಿಂದ ಸಂಗೀತ ಕಾರ್ಯಕ್ರಮಮ ನಡೆಯಲಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net