

ಮೂಡುಬಿದಿರೆ: ಕುಟುಂಬದಲ್ಲಿ ಯಾರೇ ಅನಾರೋಗ್ಯದಿಂದ ಇದ್ದರೂ ಹೆಂಗಸರು ಅತಿ ಕಾಳಜಿ ವಹಿಸುತ್ತಾರೆ. ಆದರೆ ತಮ್ಮ ಕಾಯಿಲೆಗೆ ಕೆಲವೊಮ್ಮೆ ಅಸಡ್ಡೆ ಮಾಡುತ್ತಾರೆ. ಕುಟುಂಬ ದೈನಂದಿನ ಜವಾಬ್ದಾರಿ ನಿಭಾಯಿಸುವ ಮಹಿಳೆಯರು ತಮ್ಮ ಆರೋಗ್ಯದ ಬಗ್ಗೆಯೂ ನಿಗಾ ವಹಿಸಬೇಕು ಎಂದು ಆಳ್ವಾಸ್ ಹೆಲ್ತ್ ಸೆಂಟರ್‌ನ ಡಾ.ಸದಾನಂದ ನಾಯ್ಕ ಹೇಳಿದರು.
ಶ್ರೀ ಗುರುಮಠ ಕಾಳಿಕಾಂಬಾ ದೇವಸ್ಥಾನದ ಸಭಾಂಗಣದಲ್ಲಿ ಶ್ರೀ ಕಾಳಿಕಾಂಬಾ ಮಹಿಳಾ ಸಮಿತಿ ಶನಿವಾರ ಶ್ರಾವಣ ಸಂಧ್ಯಾ ಕಾರ್ಯಕ್ರಮದಲ್ಲಿ ಮಹಿಳೆಯರಿಗೆ ಆರೋಗ್ಯ ಮಾಹಿತಿ ನೀಡಿದರು.
ಆಡಳಿತ ಮೊಕ್ತೇಸರ ಎಂ.ಕೆ.ಬಾಲಕೃಷ್ಣ ಆಚಾರ್ಯ ಕಾರ್ಯಕ್ರಮ ಉದ್ಘಾಟಿಸಿದರು. ಮಹಿಳಾ ಸಮಿತಿ ಅಧ್ಯಕ್ಷೆ ಶಾಂತಲಾ ಸೀತಾರಾಮ ಆಚಾರ್ಯ ಅಧ್ಯಕ್ಷತೆ ವಹಿಸಿದರು.
ಮೊಕ್ತೇಸರರಾದ ಉಳಿಯ ಶಿವರಾಮ ಆಚಾರ್ಯ, ಯೋಗೀಶ ಆಚಾರ್ಯ, ಕಾಳಿಕಾಂಬಾ ಸೇವಾ ಸಮಿತಿ ಅಧ್ಯಕ್ಷ ಶ್ರೀನಾಥ್ ಆಚಾರ್ಯ, ಮಹಿಳಾ ಸಮಿತಿ ಕೋಶಾಧಿಕಾರಿ ವಿದ್ಯಾಶ್ರೀ ಸುರೇಶ್, ಕಾರ್ಯದರ್ಶಿ ರಶ್ಮಿತಾ ಅರವಿಂದ್ ಉಪಸ್ಥಿತರಿದ್ದರು.
ದತ್ತಿನಿಧಿ ಹಾಗೂ ದಾನಿಗಳ ನೆರವಿನಿಂದ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪಾಸಾದ ವಿದ್ಯಾರ್ಥಿನಿಯರಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು.