

ಬೆಂಗಳೂರು: ‘ವರ್ಚುವಲ್ ರಿಯಾಲಿಟಿ ಆ್ಯಂಡ್ ಕ್ಲೈಮೇಟ್ ಚೇಂಜ್ ಕಮ್ಯೂನಿಕೇಷನ್’ ವಿಷಯ ಸಂಶೋಧನೆಗೆ ಬೆಂಗಳೂರು ಮೂಲದ ಶ್ರವಣ್ ರಿಗ್ರೆಟ್ ಅಯ್ಯರ್‌ಗೆ ಅಮೆರಿಕಾದ ಬಿಗ್-10 ಆ್ಯಂಡ್ ರಿಸರ್ಚ್-1 ವಿಶ್ವವಿದ್ಯಾಲಯದಿಂದ ‘ಡಾಕ್ಟರೇಟ್’ ಪದವಿ ಲಭಿಸಿದೆ.
ಪರಿಸರ ಹಾಗೂ ಹವಾಮಾನ ವೈಪರೀತ್ಯ ಮಾನವನ ಬದುಕಿನ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ವರ್ಚುವಲ್ ರಿಯಾಲಿಟಿ ತಂತ್ರಜ್ಞಾನದ ಮೂಲಕ ಚಿತ್ರಿಸಿ, ಸಮೀಕ್ಷೆ ನಡೆಸಿದ್ದಾರೆ. ಲಭ್ಯವಾದ ದತ್ತಾಂಶಗಳನ್ನು ಸಂಶೋಧಿಸಿ ಡಾ.ಜಾನ್ ಪಾರ್ಲಿಕ್ ಮಾರ್ಗದರ್ಶನದಲ್ಲಿ ಪ್ರಬಂಧ ಮಂಡಿಸಿದ್ದರು.
ಮೇ 19ರಂದು ವಿಶ್ವವಿದ್ಯಾಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಡೀನ್ ಡಾಫ್ನಾ ಲೆಮಿಶ್ ‘ಡಾಕ್ಟರೇಟ್’ ಪದವಿ ಪ್ರದಾನ ಮಾಡಿ ಗೌರವಿಸಿದ್ದಾರೆ.