ಕೇಸರಿ ಬೆಟ್ಟದಲ್ಲಿ ತ್ರಿಕಾಲ ಲಿಂಗ ಪೂಜೆ ತಪೋನುಷ್ಠಾನ

ISHTALINGA POOJE
Published on


ವಿಜಯವಾಣಿ ಸುದ್ದಿಜಾಲ ಕಲಬುರಗಿ
ಲೋಕ ಕಲ್ಯಾಣಕ್ಕಾಗಿ ಮತ್ತು ಶ್ರಾವಣ ಮಾಸದ ಅಂಗವಾಗಿ ನಗರದ  ಹೊರವಲಯದ ಜೇವರ್ಗಿ ಹೆದ್ದಾರಿಯಲ್ಲಿರುವ  ಕೇಸರಿಬೆಟ್ಟದ ಸಾಂಬಶಿವಯೋಗಿಶ್ವರ ಮಠದಲ್ಲಿ  ಬಾಲ ತಪಸ್ವಿ ದ್ವಿತೀಯ ಸಾಂಬಶಿವಯೋಗಿ ಶಿವಾಚಾರ್ಯತು ಒಂದು ತಿಂಗಳ ಕಾಲ ತ್ರಿಕಾಲ ಇಷ್ಟಲಿಂಗ ಮಹಾಪೂಜೆ, ತಪೋನುಷ್ಠಾನ ಮತ್ತು ವಿವಿಧ ಧಾರ್ಮಿಕ  ಕಾರ್ಯಕ್ರಮಗಳು ಆರಂಭಗೊAವೆ ಎಂದು ಶ್ರೀಮಠದ ಭಕ್ತ ಮಂಡಳಿಯ ಶರಣಗೌಡ ಪಾಟೀಲï ತಿಳಿಸಿದರು.
ತಪೋನಿಧಿ ಸಾಂಬಶಿವಯೋಗಿಶ್ವರರ ಕತೃ ಗದ್ದುಗೆಗೆ  ನಿತ್ಯ ಬೆಳಗ್ಗೆ ಮತ್ತು ಸಂಜೆ ರುದ್ರಾಭಿಷೇಕ, ಗುರುಪೂಜೆ, ಭಜನೆ ಮೊದಲಾದವು ನಡೆಯುತ್ತಿವೆ. ಆ.೨೮ರಂದು ಬೆಳಗ್ಗೆ ೯ ಗಂಟೆಗೆ  ಎರಡನೇ ಶ್ರಾವಣ ಸೋಮವಾರದ ಮಹಾಪೂಜೆಯ ಸಮಾರಂಭ, ಇಷ್ಟಲಿಂಗ ಸಾಮೂಹಿಕ ಮಹಾಪೂಜೆ ಹಾಗೂ ಭಕ್ತರಿಂದ ತುಲಾಭಾರ ಕಾರ್ಯಕ್ರಮ  ಹಮ್ಮಿಕೊಳ್ಳಲಾಗಿದೆ  ಎಂದು ಭಾನುವಾರ ನಗರದಲ್ಲಿ ಸುದ್ದಿಗೋಷ್ಠಿಯಲಿ ತಿಳಿಸಿದರು.
 ಸೆ.೪ರಂದು ಬೆಳಗ್ಗೆ ೯ರಂದು ೩ನೇ ಸೋಮವಾರದ ಇಷ್ಠಲಿಂಗ ಸಾಮೂಹಿಕ ಮಹಾಪೂಜೆ ನಡೆಯಲಿದೆ.ನಂತರ ಅಖಿಲಾ ಶೇಖರ ಮತ್ತು ವಿಶ್ವಶೇಖರ  ಚಂದ್ರಶೇಖರ ಕವಾಡಿಮಠ ಅವರಿಗೆ   ಧರ್ಮವೀರ ಪ್ರಶಸ್ತಿ ಪ್ರದಾನ ಸಮಾರಂಭ ನಡೆಲಿದೆ. ಬೆಳಗ್ಗೆ ೬ರಿಂದ ೭ರ ವರೆಗೆ ಭವರಲಾಲï ಆರ್ಯ ಅವರಿಂದ ಸಾಮೂಹಿಕ ಯೋಗ ಶಿಬಿರ ಜರುಗಲಿದೆ. ಸೆ.೧೧ರಂದು ಬೆಳಗ್ಗೆ ೯ಕ್ಕೆ ೪ನೇ ಸೋಮವಾರದ ಇಷ್ಟಲಿಂಗ  ಸಾಮೂಹಿಕ ಮಹಾಪೂಜೆ.ಸೆ.೧೫ರಂದು ಬೆಳಗ್ಗೆ ೯ರಂದು ೫ನೇ ಸೋಮವಾರದ  ಸಾಮೂಹಿಕ ಪೂಜೆ ನಡೆಯಲಿದೆ. ಹೆಚ್ಚಿನ ಸಂಖ್ಯೆಯಲ್ಲಿ  ಶ್ರಾವಣ ಮಾಸದ ತಪೋನುಷ್ಠಾನ ಮಹಾಪೂಜೆಯಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಲಕ್ಷಿö್ಮÃಕಾಂತ ಸ್ವಾದಿ, ಸುನೀಲ್ ರಾಠೋಡ, ಶಂಕರ ಜೋಕಾ, ದಶರಥ ಇಂಗೋಳೆ ಮೊದಲಾದವರಿದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net