ಶ್ರಾವಣ ಸಂಜೆ 2ನೇ ಸಾಹಿತ್ಯಗೋಷ್ಠಿ 28ರಂದು

SAMSKRUTIKA KARYAKRAMA
Published on

ಹಿರೇಕೆರೂರ: ತಾಲೂಕು ಕಸಾಪ ವತಿಯಿಂದ ತಾಲೂಕಿನ ಹಂಸಭಾವಿ ಗ್ರಾಮದ ಶಿವಯೋಗಾಶ್ರಮದಲ್ಲಿ ಆ. 28ರಂದು ಸಂಜೆ 5.30 ಕ್ಕೆ ಶ್ರಾವಣ ಸಂಜೆ 2ನೇ ಸಾಹಿತ್ಯಗೋಷ್ಠಿ, ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಶಾಸಕರಿಗೆ ಅಭಿನಂದನಾ ಕಾರ್ಯಕ್ರಮ ಆಯೋಜಿಸಲಾಗಿದೆ.

ಶಾಸಕ ಯು.ಬಿ. ಬಣಕಾರ ಕಾರ್ಯಕ್ರಮ ಉದ್ಘಾಟಿಸಲಿದ್ದು, ಕಸಾಪ ಹೊಬಳಿ ಘಟಕದ ಅಧ್ಯಕ್ಷ ಡಾ. ಪ್ರಭುಸ್ವಾಮಿ ಹಾಲೇವಾಡಿಮಠ ಅಧ್ಯಕ್ಷತೆ ವಹಿಸುವರು.

ಮುಖ್ಯ ಅತಿಥಿಗಳಾಗಿ ಗ್ರಾಪಂ ಅಧ್ಯಕ್ಷ ರಾಜಶೇಖರ ಹುಚ್ಚಗೊಂಡರ, ತಾಲೂಕು ಕಸಾಪ ಅಧ್ಯಕ್ಷ ಎನ್. ಸುರೇಶಕುಮಾರ, ಅಪೆಕ್ಸ್ ಬ್ಯಾಂಕ್ ನಿರ್ದೇಶಕ ಲಿಂಗರಾಜ ಚಪ್ಪರದಳ್ಳಿ, ಕೋಶಾಧ್ಯಕ್ಷ ಮಹೇಂದ್ರ ಬಡಳ್ಳಿ, ಮೃತ್ಯುಂಜಯ ಕೆಂಬಿ ಸೇರಿ ಕಸಾಪ ವಿವಿಧ ಪದಾಧಿಕಾರಿಗಳು, ಸಾಹಿತಿಗಳು, ಗಣ್ಯರು ಭಾಗವಹಿಸುವರು.

ಪ್ರಾಚಾರ್ಯ ಡಾ.ಎಸ್.ಪಿ. ಗೌಡರ ‘ಶರಣರು ಕಂಡ ಲಿಂಗ, ವರ್ಗ ಮತ್ತು ವರ್ಣ ಸಮಾಜ ಕುರಿತು ಉಪನ್ಯಾಸ ನೀಡಲಿದ್ದಾರೆ ಎಂದು ಕಾರ್ಯದರ್ಶಿಗಳಾದ ಪಿ.ಎಸ್. ಸಾಲಿ, ಎಂ.ಎಂ. ಮತ್ತೂರ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net