

ಸರ್ವಜ್ಞ ಪಿಯು ಕಾಲೇಜಿನಲ್ಲಿ ಆಯೋಜನೆ *ಚಿಂತನ-ಮಂಥನ ಕಾರ್ಯಕ್ರಮದಲ್ಲಿ ಪ್ರೊ.ಚನ್ನಾರಡ್ಡಿ ಹೇಳಿಕೆ
ವಿಜಯವಾಣಿ ಸುದ್ದಿಜಾಲ ಕಲಬುರಗಿ
ಸಂಗೀತದಿAದ ಮಾನಸಿಕ ಒತ್ತಡ ಕಡಿಮೆಯಾಗಲಿದೆ. ಮನಸ್ಸು ನಿರಾಳವಾಗಿ ನೆನಪಿನ ಶಕ್ತಿ ವೃದ್ಧಿಯಾಗುತ್ತದೆ ಎಂದು ಸರ್ವಜ್ಞ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಅಧ್ಯಕ್ಷ ಪ್ರೊ.ಚನ್ನಾರಡ್ಡಿ ಪಾಟೀಲ್ ಅಭಿಪ್ರಾಯಪಟ್ಟರು.
ನಗರದ ಸರ್ವಜ್ಞ ಮತ್ತು ಜಸ್ಟಿಸ್ ಶಿವರಾಜ ಪಾಟೀಲ್ ಪದವಿ ಪೂರ್ವ ವಿಜ್ಞಾನ ಮಹಾವಿದ್ಯಾಲಯ ಹಾಗೂ ಜಸ್ಟಿಸ್ ಶಿವರಾಜ ವಿ. ಪಾಟೀಲ್ ಫೌಂಡೇಶನ್ ಸಹಯೋಗದಲ್ಲಿ ಶ್ರಾವಣ ಮಾಸದ ನಿಮಿತ್ಯ ವಿದ್ಯಾರ್ಥಿಗಳಿಗೆ ವ್ಯಕ್ತಿತ್ವ ವಿಕಸನ ಪ್ರೇರಣೋಪನ್ಯಾಸ, ನ್ಯಾಯಮೂರ್ತಿ ಡಾ.ಶಿವರಾಜ ಪಾಟೀಲ್ ಅವರ ಮುಂಜಾವಿಗೊAದು ನುಡಿಕಿರಣ-೩೬೫ ನುಡಿಮುತ್ತು ಕುರಿತು ಗುರುವಾರ ನಡೆದ ಚಿಂತನ-ಮAಥನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಸಂಗೀತಕ್ಕೆ ಮನಸ್ಸನ್ನು ಅರಳಿಸುವ ಶಕ್ತಿ ಇದೆ. ಮಾನವೀಯ ಮೌಲ್ಯ ಬಿತ್ತುವುದರಿಂದ ಮನಸ್ಸು ಜಾಗೃತವಾಗುತ್ತದೆ. ನ್ಯಾಯಮೂರ್ತಿ ಡಾ. ಶಿವರಾಜ ಪಾಟೀಲ ಅವರ ಮುಂಜಾವಿಗೊAದು ನುಡಿಕಿರಣ-೩೬೫ರ ನುಡಿಮುತ್ತುಗಳು, ಶರಣರ ವಚನಗಳನ್ನು ಸಂಗೀತದ ಮೂಲಕ ಕೇಳಿದ್ದರಿಂದ ಮನಸ್ಸಿಗೆ ಸಂತಸವಾಗಿದೆ. ಸಂಗೀತ ಸುಪ್ತ ಮನಸ್ಸು ಮತ್ತು ಭಾವನೆಯ ಮೇಲೆ ಉತ್ತಮ ಪರಿಣಾಮ ಬೀರುತ್ತದೆ ಎಂದರು.
ಕಲಬುರಗಿ ಹಿರಿಯ ಕಲಾವಿದ ಫಕೀರೇಶ್ ಕಣವಿ, ಡಾ.ಕುಮಾರ ಕಣವಿ, ಮಾಲಾಶ್ರೀ ಕಣವಿ ಸಂಗೀತ ಕಾರ್ಯಕ್ರಮ ನಡೆಸಿಕೊಡುವ ಮೂಲಕ ಉದ್ಘಾಟಿಸಿದರು. ಪಂಚಾಕ್ಷರಿ ಕಣವಿ ತಬಲಾ ಸಾಥ್ ನೀಡಿದರು. ಸುಧೀಂದ್ರ ಕುಲಕರ್ಣಿ ತಾಳವಾದ್ಯ, ವಯೋಲಿನ್ ವಾದ್ಯ ನಾರಾಯಣ ವಿ.ಎ. ನುಡಿಸಿದರು.
ಸಂಸ್ಥೆಯ ಅಧ್ಯಕ್ಷೆ ಗೀತಾ ಚನ್ನಾರಡ್ಡಿ ಪಾಟೀಲ, ಸಂಸ್ಥೆಯ ಮುಖ್ಯ ಶೈಕ್ಷಣಿಕ ನಿರ್ದೇಶಕ ಅಭಿಷೇಕ ಪಾಟೀಲ್, ಸರ್ವಜ್ಞ ಚಿಣ್ಣರ ಲೋಕ ಶೈಕ್ಷಣಿಕ ನಿರ್ದೇಶಕಿ ಸಂಗೀತಾ ಪಾಟೀಲ್, ಸರ್ವಜ್ಞ ಕಾಲೇಜಿನ ಪ್ರಾಂಶುಪಾಲ ಎಂ.ಸಿ.ಕಿರೇದಳ್ಳಿ, ಜಸ್ಟಿಸ್ ಶಿವರಾಜ ಪಾಟೀಲ್ ಕಾಲೇಜಿನ ಪ್ರಾಂಶುಪಾಲ ವಿನುತಾ ಆರ್.ಬಿ., ಸರ್ವಜ್ಞ ಕಾಲೇಜಿನ ಉಪ-ಪ್ರಾಂಶುಪಾಲ ಪ್ರಶಾಂತ ಕುಲಕರ್ಣಿ, ಸರ್ವಜ್ಞ ಪದವಿ ಕಾಲೇಜಿನ ಪ್ರಾಂಶುಪಾಲ ಪ್ರಭುಗೌಡ ಸಿದ್ಧಾರೆಡ್ಡಿ, ಸರ್ವಜ್ಞ ಚಿಣ್ಣರ ಲೋಕದ ಪ್ರಾಂಶುಪಾಲ ವಿಜಯಕುಮಾರ ನಾಲವಾರ್, ಕರುಣೇಶ್ ಹಿರೇಮಠ್ ಪಾಲ್ಗೊಂಡಿದ್ದರು. ಗುರುರಾಜ್ ಕುಲಕರ್ಣಿ ಪ್ರಾಸ್ತಾವಿಕ ಮಾತನಾಡಿದರು. ಡಾ.ವಿದ್ಯಾವತಿ ಪಾಟೀಲ್ ನಿರೂಪಿಸಿದರು. ಸೃಜಲ್ಯ ಪ್ರಾರ್ಥಿಸಿದರು.
ಕೋಟ್
ಸಂಗೀತದಿAದ ಮಾನಸಿಕ ಸ್ಥಿರತೆ ಹೆಚ್ಚಾಗಲಿದೆ. ಖಿನ್ನತೆ, ಆತಂಕ ದೂರ ಮಾಡಲಿದೆ. ರಕ್ತದೊತ್ತಡ ಕಡಿಮೆ ಮಾಡುತ್ತದೆ. ಮನಸ್ಸನ್ನು ಉತ್ತೇಜಿಸುವ ಶಕ್ತಿ ಹೊಂದಿದೆ. ಎಲ್ಲರೂ ಸಂಗೀತ ಕೇಳುವ ಮೂಲಕ ಸಂತಸದ ಜೀವನ ತಮ್ಮದಾಗಿಸಿಕೊಳ್ಳಬೇಕು.
ಪ್ರೊ.ಚನ್ನಾರಡ್ಡಿ ಪಾಟೀಲ್,
ಸಂಸ್ಥಾಪಕ ಅಧ್ಯಕ್ಷ, ಸರ್ವಜ್ಞ ಶಿಕ್ಷಣ ಸಂಸ್ಥೆ.