ನಿಡ್ತ ಶಾಲೆ ಮಕ್ಕಳಿಂದ ಕಿರುನಾಟಕ ಪ್ರದರ್ಶನ

24ss1makkalu kiru nataka
ನಿಡ್ತ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ದಿನಾಚರಣೆ ಅಂಗವಾಗಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಕ್ಕಳಿಂದ ಕಿರು ನಾಟಕ ಪ್ರದರ್ಶನ.
Published on

ಶನಿವಾರಸಂತೆ: ಸಮೀಪದ ನಿಡ್ತ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಶಾಲಾ ವಿದ್ಯಾರ್ಥಿ ಮಂತ್ರಿ ಮಂಡಳ ವತಿಯಿಂದ ಮಕ್ಕಳ ದಿನವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.

ಮಕ್ಕಳ ದಿನಾಚರಣೆ ಅಂಗವಾಗಿ ವಿದ್ಯಾರ್ಥಿಗಳು ನೃತ್ಯ, ಹಾಡು, ಕಿರು ನಾಟಕ, ನೃತ್ಯರೂಪಕ ಇನ್ನು ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಮುಖ್ಯಶಿಕ್ಷಕಿ ಪಿ.ಕೆ.ರತ್ನಾ, ಸಹ ಶಿಕ್ಷಕರಾದ ರೋಸಿ, ಜಿ.ಪಿ.ಸವಿತಾ ಪಾಲ್ಗೊಂಡಿದ್ದರು. ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆ ನಡೆಯಿತು. ಬಳಿಕ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net