ರೈಲಿನ ಟಾಯ್ಲೆಟ್‌ನಲ್ಲಿ ಶಾರ್ಟ್ ಸರ್ಕ್ಯೂಟ್

Published on

ಶ್ರೀರಂಗಪಟ್ಟಣ: ತಾಲೂಕಿನ ಚಿಂದಗಿರಿಕೊಪ್ಪಲು ಗ್ರಾಮದ ಸಮೀಪ ಶುಕ್ರವಾರ ರಾತ್ರಿ ತೆರಳುತ್ತಿದ್ದ ವಿಶ್ವಮಾನವ ರೈಲಿನ ಶೌಚಗೃಹದಲ್ಲಿ ಅಚಾನಕ್ ಶಾರ್ಟ್ ಸರ್ಕ್ಯೂಟ್ ಉಂಟಾಗಿದ್ದು, ಕೆಲಕಾಲ ರೈಲು ಪ್ರಯಾಣಿಕರು ಆತಂಕಕ್ಕೆ ಒಳಗಾಗುವಂತೆ ಮಾಡಿತು.

ಬೆಂಗಳೂರಿನಿಂದ ಮೈಸೂರು ಕಡೆಗೆ ಆಗಮಿಸುತ್ತಿದ್ದ ವೇಳೆ ಶಾರ್ಟ್ ಸರ್ಕ್ಯೂಟ್ ಉಂಟಾಗಿದೆ. ವಿಚಾರ ತಿಳಿದ ಲೋಕೋಪೈಲೆಟ್ ತಕ್ಷಣವೇ ರೈಲು ನಿಲ್ಲಿಸಿದ್ದು, ಸಿಬ್ಬಂದಿ ರೈಲಿನಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಳಿಸಿ ಸಂಪೂರ್ಣ ತಪಾಸಣೆ ನಡೆಸಿ ಸುಮಾರು 10 ನಿಮಿಷಗಳ ಬಳಿಕ ರೈಲು ಮೈಸೂರಿಗೆ ತೆರಳಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net