ಸಾರ್ಟ್ ಸರ್ಕ್ಯೂಟ್ ಕಬ್ಬಿನ ಗದ್ದೆ ಬೆಂಕಿಗಾಹುತಿ

img_0067.jpg
Published on

ಚನ್ನಪಟ್ಟಣ: 

ಕಬ್ಬಿನ ಬೆಳೆಗೆ ಬೆಂಕಿತಗುಲಿ ಲಕ್ಷಾಂತರ ಮೌಲ್ಯದ ಬೆಳೆ ನಾಶವಾಗಿರುವ ಘಟನೆ ತಾಲೂಕಿನ ತಾಲೂಕಿನ ಚಿಕ್ಕಬೋರೇಗೌಡನದೊಡ್ಡಿ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.

ವಿದ್ಯುತ್‌ ಸ್ಪರ್ಶದಿಂದ ಬೆಳೆಗೆ ಬೆಂಕಿ ತಗುಲಿ ಈ ಅವಘಡ ಸಂಭವಿಸಿದೆ. ಚಿಕ್ಕಬೋರೇಗೌಡನ ದೊಡ್ಡಿ ಗ್ರಾಮದ ಶಿವಕಾಳ ಮತ್ತು ಇಗ್ಗಲೂರು ಗ್ರಾಮದ ಅಂದಾನಿ ಎಂಬ ಇಬ್ಬರು ರೈತರು ತಮ್ಮ ಅಕ್ಕಪಕ್ಕದ ನಾಲ್ಕು ಎಕರೆ ಜಮೀನಿನಲ್ಲಿ ಕಬ್ಬು ಬೆಳೆದಿದ್ದರು. ತಲಾ ಎರಡು ಎಕರೆಯಲ್ಲಿ ಕಳೆದ 6 ತಿಂಗಳುಗಳಿಂದ ಸಾಕಷ್ಟು ಶ್ರಮವಹಿಸಿ ಬೆಳೆದಿದ್ದ ಕಬ್ಬಿನ ಬೆಳೆ ಸಂಪೂರ್ಣವಾಗಿ ಬೆಂಕಿಗಾಹುತಿಯಾಗಿದೆ. ಸುಮಾರು 8 ಲಕ್ಷ ಮೌಲ್ಯದ ಬೆಳೆಯಾಗಿದೆ ಎಂದು ಅಂದಾಜಿಸಲಾಗಿದೆ.

ಜಮೀನಿನಲ್ಲಿ ವಿದ್ಯುತ್ ಲೈನ್ ಹಾದುಹೋಗಿದ್ದು, ವಿದ್ಯುತ್ ಇಲಾಖೆಯ ನಿರ್ಲಕ್ಷ್ಯದಿಂದ ಜಮೀನಲ್ಲಿ ಹಾದುಹೋಗಿರುವ ಲೈನ್ ಶಾರ್ಟ್ ಸರ್ಕ್ಯೂಟ್ ನಿಂದ ಕಬ್ಬಿನ ಬೆಳೆಗೆ ವಿದ್ಯುತ್‌ ಸ್ಪರ್ಶವಾಗಿದೆ ಎಂಬುದು ರೈತರ ಆರೋಪವಾಗಿದೆ. ಇದರೊಂದಿಗೆ, ಅಗ್ನಿಶಾಮಕ ವಾಹನ ಸರಿಯಾದ ಸಮಯಕ್ಕೆ ಬಾರದ ಕಾರಣ ಜಮೀನಿಲ್ಲಿದ್ದ ಸಂಪೂರ್ಣ ಕಬ್ಬು ಬೆಂಕಿಯಲ್ಲಿ ಬೆಂದು ಹೋಗಿದೆ ಎಂದು ರೈತರು ಅಳಲು ತೊಡಿಕೊಂಡಿದ್ದಾರೆ. ಘಟನೆಯಿಂದ ರೈತರು ಅಪಾರವಾದ ನಷ್ಟಕ್ಕೆ ಒಳಗಾಗಿದ್ದು, ಸೂಕ್ತ ಪರಿಹಾರಕ್ಕೆ ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net