

ಕೋಲಾರ: ರಾತ್ರಿ ಬೆಳಗಾಗುವುದರೊಳಗೆ ಪೆಟ್ಟಿಗೆ ಅಂಗಡಿಯೊಂದು ಕಣ್ಮರೆಯಾಗಿದ್ದು, ಇದಕ್ಕೆ ಜಮೀನು ವಿವಾದ ಕಾರಣವೇ ಎಂಬ ಶಂಕೆ ಮೂಡಿದೆ. ಕೋಲಾರ ಜಿಲ್ಲೆಯಲ್ಲಿ ಮಾಲೂರು ತಾಲೂಕಿನಲ್ಲಿ ಈ ಘಟನೆ ನಡೆದಿದೆ.
ಮಾಲೂರು ತಾಲೂಕಿನ ಎಡಕೋಡಿ ಗ್ರಾಮದಲ್ಲಿ ಶಂಕರಪ್ಪ ಎಂಬವರಿಗೆ ಸೇರಿರುವ ಪೆಟ್ಟಿಗೆ ಅಂಗಡಿ ಕಾಣೆಯಾಗಿದೆ. ಅಂಗವಿಕಲ ಕುಟುಂಬದ ಜೀವನೋಪಾಯಕ್ಕಾಗಿ ಈ ಅಂಗಡಿಯನ್ನು ಹಾಕಿಕೊಳ್ಳಲಾಗಿತ್ತು.
ಆದರೆ ಇಂದು ಬೆಳಗ್ಗೆ ಈ ಪೆಟ್ಟಿಗೆ ಅಂಗಡಿಯೇ ನಾಪತ್ತೆಯಾಗಿದೆ. ಜಮೀನು ವಿವಾದದ ಹಿನ್ನಲೆಯಲ್ಲಿ ಪಕ್ಕದ ಜಮೀನಿನವರು ಹೊತ್ತೊಯ್ದಿರಬಹುದು ಎಂಬ ಶಂಕೆ ಮೂಡಿದೆ. ಅಂಗಡಿಯಲ್ಲಿದ್ದ ಸಾಮಗ್ರಿಗಳ ಜತೆಗೆ ಅಂಗಡಿಯನ್ನೂ ತೆಗೆಯಲಾಗಿದ್ದು, ಮಾಲೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.