ಅಂಗಡಿ ವಿವಾಧ ವ್ಯಾಪಾರಿ ಆತ್ಮಹತ್ಯೆ ದೊಡ್ಡ ಆಲಹಳ್ಳಿಯಲ್ಲಿ ಘಟನೆ

The public protested in Doddalahalli following the death of a merchant
Published on

ಕನಕಪುರ: ಪುಟ್‌ಬಾತ್ ಅಂಗಡಿ ವ್ಯಾಪಾರದಲ್ಲಿ ಎರಡು ಗುಂಪುಗಳ ನಡುವಿನ ವಿವಾಧದಲ್ಲಿ ತನಗೆ ನ್ಯಾಯ ಸಿಗಲಿಲ್ಲವೆಂದು ಬೇಸತ್ತ ಯುವಕನೊಬ್ಬ ಬಸ್‌ ನಿಲ್ದಾಣದಲ್ಲೇ ಹಾಡುಹಗಲೇ ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ   ಕನಕಪುರ ತಾಲೂಕಿನ ದೊಡ್ಡ ಆಲಹಳ್ಳಿ ಯಲ್ಲಿ ನಡೆದಿದೆ.

ರವಿಚಂದ್ರ (35) ಆತ್ಮಹತ್ಯೆ ಮಾಡಿಕೊಂಡ ಯುವಕ. ಮೃತ ರವಿಚಂದ್ರ ದೊಡ್ಡಆಲಹಳ್ಳಿ ಬಸ್ ನಿಲ್ದಾಣ ವೃತ್ತದಲ್ಲಿ  ಹೂವಿನ ವ್ಯಾಪಾರ ಮಾಡುತ್ತಿದ್ದರು. ಆದರೆ, ರವಿಚಂಧ್ರ  ಅವರ ಅಂಗಡಿ ಮುಂದೆ ಮತ್ತೊಬ್ಬರು ಅಂಗಡಿ ನಡೆಸುತ್ತಿದ್ದು, ವ್ಯಾಪಾರದಲ್ಲಿನ ಪೈಪೊಟಿಯಿಂದ  ಫುಟ್‌ಪಾತ್‌ನಲ್ಲಿ ವ್ಯಾಪಾರ ಮಾಡಿಕೊಂಡು ಬರುತ್ತಿರುವ ರವಿಚಂದ್ರನ ಕುಟುಂಬವನ್ನು ಅಲ್ಲಿಂದ ಸ್ಥಳಾಂತರ ಮಾಡಿಸುವ ಸಂಬಂಧ  ಎರಡು ಗುಂಪುಗಳ ನಡುವೆ ಗಲಾಟೆ ಮಾತಿನ ಚಕಮಕಿ ನಡೆದಿದೆ.

ravi chandra

ಈ ಸಂಬಂಧ ಗ್ರಾಮದಲ್ಲಿ ರಾಜಿಪಂಚಾಯತಿ ಸಹ ನಡೆದಿದ್ದು, ತಮ್ಮ ಮೇಲೆ ನಿರಂತರ ಕಿರುಕುಳ ನಡೆಯುತ್ತಿದೆ ಎಂದು ರವಿಚಂದ್ರ ಸಾತನೂರು ಪೋಲಿಸ್ ಠಾಣೆಗೂ ಸಹ ದೂರು ನೀಡಿದ್ದರು.  ಕಳೆದ ಎರಡು ದಿನಗಳ ಹಿಂದೆ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ರವಿಚಂದ್ರ ಪತ್ನಿಯ ಮೇಲು ಹಲ್ಲೆ ನಡೆಸಲಾಗಿತ್ತು.  ಈ ಹಿನ್ನೆಲೆಯಲ್ಲಿ ಎಲ್ಲೂ ನ್ಯಾಯ ಸಿಗಲಿಲ್ಲವೆಂದು ಬೇಸತ್ತ ರವಿಚಂದ್ರ ಶುಕ್ರವಾರ ಬೆಳಿಗ್ಗೆ ಬಸ್‌ನಿಲ್ದಾಣದಲ್ಲಿ ರೇಷ್ಮೆತೋಟಕ್ಕೆ ಬಳಸುವ ಮೆಟಾಸೆಡ್ ಎನ್ನುವ ಕೀಟನಾಶಕ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಉದ್ವಿಗ್ನ

ರವಿಚಂದ್ರ ಸಾವಿನ ಹಿನ್ನೆಲೆಯಲ್ಲಿ ದೊಡ್ಡಆಲಹಳ್ಳಿಯಲ್ಲಿ  ಗ್ರಾಮದಲ್ಲಿ ಉದ್ವಿಗ್ನಕ್ಕೆ ಕಾರಣವಾಗಿತ್ತು. ಸಾವಿನ ಸುದ್ದಿ ಗ್ರಾಮದಲ್ಲಿ ಹಬುತ್ತಿದ್ದಂತೆ ಗ್ರಾಮಸ್ಥರು ಸಂಬಂಧಿಕರು ಸಾವಿಗೆ ಕಾರಣವಾದವರ ಅಂಗಡಿಯನ್ನು ದ್ವಂಸಮಾಡಿ ರಸ್ತೆಯಲ್ಲಿ ಟೈರ್‌ಗಳಿಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದರು.

ಸುದ್ದಿ ತಿಳಿಯುತ್ತಿದಂತೆ ಅಗ್ನಿಶಾಮಕ ದಳದವರು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದರು. ಸಾತನೂರು ಪೋಲಿಸರು ಕುಟುಂಬಸ್ಥರನ್ನು ಸಮಾಧನಗೊಳಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸುವ ಭರವಸೆ ನೀಡಿದರು. ಬಳಿಕ ಕನಕಪುರ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ಮೃತ ದೇಹವನ್ನು ಕಳುಹಿಸಲಾಗಯಿತು. ಮೃತನ ಪತ್ನಿ ನೀಡಿದ ದೂರಿನ ಮೇರೆಗೆ ಸಾತನೂರು ಪೊಲೀಸರು ದ್ಯಾವಯ್ಯ, ಶಿವು, ಸಂಧ್ಯಾ, ಜಯಲಕ್ಷ್ಮೀ, ಕಿರಣ್, ಶಶಿಕಲಾ, ಎನ್ನುವರ ವಿರುದ್ದ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net