ಗುಂಡು ಹಾರಿಸಿ ರೌಡಿ ಶೀಟರ್ ಬಂಧನ

Crime_2.jpg
Published on

ನಾಲ್ಕು ಸುತ್ತು ಗುಂಡು ಹಾರಿಸಿದ ಪಿಎಸ್‌ಐ ಅಶೋಕ ಪಾಟೀಲ್ | ಇಬ್ಬರು ಪೇದೆ ಗಾಯ


ವಿಜಯವಾಣಿ ಸುದ್ದಿಜಾಲ ಬೀದರ್
ಖಚಿತ ಮಾಹಿತಿ ಮೇರೆಗೆ ಆರೋಪಿ ಬಂಧನಕ್ಕೆ ಹೋಗಿದ್ದ ವೇಳೆ ಪೊಲೀಸರ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದ ರೌಡಿ ಸಂಗಮೇಶ ಆನಂದ ಬಿರಾದಾರ್ ಕಾಲಿಗೆ ಗುಂಡು ಹೊಡೆದು ಬಂಧಿಸಿದ ಘಟನೆ ಶುಕ್ರವಾರ ನಡೆದಿದೆ.
ಎರಡು ದಿನ ಹಿಂದೆ ಕಣಜಿ ಗ್ರಾಮದ ಪ್ರಕಾಶ ಸ್ವಾಮಿ ಅವರನ್ನು ಸಂಗಮೇಶ ಮತ್ತು ಇತರರು ಅಪಹರಿಸಿದ್ದು, ಧನ್ನೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿಗಳ ಪತ್ತೆಗೆ ಭಾಲ್ಕಿ ಗ್ರಾಮೀಣ ಸಿಪಿಐ ಜಿ.ಎಸ್. ಬಿರಾದಾರ್, ಪಿಎಸ್‌ಐ ಅಶೋಕ ಪಾಟೀಲ್, ಸಿಬ್ಬಂದಿ ರಾಜೇಂದ್ರ, ಗುರುನಾಥ ಅವರನ್ನು ಒಳಗೊಂಡ ತಂಡ ರಚಿಸಲಾಗಿತ್ತು.
ತಂಡವು ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳು ಲಾತೂರನಲ್ಲಿರುವ ಬಗ್ಗೆ ಮಾಹಿತಿ ಮೇರೆಗೆ ಅಲ್ಲಿಗೆ ಹೋಗಿದೆ. ಅಲ್ಲಿಂದ ನಿಜಾಮಬಾದ್, ಉಸ್ಮಾನಬಾದ್ ಕಡೆ ಹೋಗಿರುವ ಬಗ್ಗೆ ಸುಳಿವು ಸಿಕ್ಕಿದ್ದರಿಂದ ಹಿಂಬಾಲಿಸಿ ಉಸ್ಮಾನಬಾದ್‌ನಲ್ಲಿ ಅಪಹರಿಸಿದ ಪ್ರಕಾಶನನ್ನು ಬಿಟ್ಟು ಕಾಲ್ಕಿತ್ತಿದ್ದಾರೆ. ಅಲ್ಲಿಂದ ನಿಜಾಮಬಾದ್‌ಗೆ ಹೋಗಿ ಸಂಗಮೇಶ, ಗುಂಡಪ್ಪ ಮತ್ತು ವಿಜಯ ಎಂಬುವರನ್ನು ಪೊಲೀಸರು ಬಂಧಿಸಿ ಕರೆತರುವಾಗ ಭಾಲ್ಕಿ ತಾಲೂಕಿನ ಕರಂಜಿ ಹತ್ತಿರ ಮೂತ್ರ ಬಂದಿದೆ ಎಂದು ಸಂಗಮೇಶ ಹೇಳಿದ್ದರಿಂದ ವಾಹನ ನಿಲ್ಲಿಸಿದಾಗ ಪಿಎಸ್‌ಐಗೆ ತಳ್ಳಿ ಓಡಿ ಹೋಗಿದ್ದಾನೆ.
ಸ್ವಗ್ರಾಮ ಕುರುಬಖೇಳಗಿಯಲ್ಲಿ ಇರುವ ಮಾಹಿತಿ ಮೇರೆಗೆ ಶುಕ್ರವಾರ ಬೆಳಗ್ಗೆ ಪೊಲೀಸರು ದೌಡಾಯಿಸಿದ್ದು, ಪೇದೆಗಳಾದ ರಾಜೇಂದ್ರ, ಗುರುನಾಥಗೆ ಸಂಗಮೇಶ ಮಚ್ಚಿನಿಂದ ಹೊಡೆದು ಗಾಯಗೊಳಿಸಿದ ನಂತರ ಪಿಎಸ್‌ಐ ಪಾಟೀಲ್ ಮೇಲೆ ಹಲ್ಲೆಗೆ ಮುಂದಾಗಿದ್ದ. ತಕ್ಷಣ ಸರ್ವೀಸ್ ಪಿಸ್ತೂಲ್‌ನಿಂದ ಎರಡು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ ಬಂಧನವಾಗುವAತೆ ಸೂಚಿಸಿದ್ದಾರೆ. ಕೇಳದಿದ್ದಾಗ ಪಿಎಸ್‌ಐ ಆತ್ಮರP್ಷÀಣೆಗಾಗಿ ಎರಡು ಗುಂಡು ಆತನ ಕಾಲಿನ ಮೇಲೆ ಹಾರಿಸಿದ್ದು, ಒಂದು ಮಿಸ್ ಫೈರ್ ಆದರೆ, ಇನ್ನೊಂದು ಬಲಗಾಲಿಗೆ ತಗುಲಿದೆ.
ಗಾಯಗೊಂಡ ಪೊಲೀಸರು ಹಾಗೂ ಆರೋಪಿ ಸಂಗಮೇಶನನ್ನು ಚಿಕಿತ್ಸೆಗಾಗಿ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಸಂಗಮೇಶನನ್ನು ಬ್ರಿಮ್ಸ್ಗೆ ದಾಖಲಿಸಿದ್ದು, ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸಂಗಮೇಶ ವಿರುದ್ಧ ಜಿಲ್ಲೆಯ ವಿವಿಧ ಠಾಣೆಗಳಲ್ಲಿ ೧೯ ಪ್ರಕರಣ ದಾಖಲಾಗಿವೆ. ಅಲ್ಲದೆ ಗೂಂಡಾ ಕಾಯ್ದೆಯಡಿ ೨೦೨೨ರಲ್ಲಿ ಒಂದು ವರ್ಷ ಕಲಬುರಗಿ ಕಾರಾಗೃಹದಲ್ಲಿ ಇಡಲಾಗಿತ್ತು.

(

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net