ಮಂಗಳೂರಿನ ಹೋಟೆಲ್​ನಲ್ಲಿ ದಾಂಧಲೆ, ಗುಂಡಿನ ದಾಳಿ

shoot out
Published on

ಮಂಗಳೂರು: ಇಲ್ಲಿನ ಫಳ್ನೀರ್ ಬಳಿ ಅಪರಿಚಿತರ ತಂಡ ಗುಂಡಿನ ದಾಳಿ ನಡೆಸಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ.

ಫಳ್ನೀರ್ ಬಳಿಯ ಎಂ.ಎಫ್.ಸಿ. ಹೋಟೆಲ್ ಮತ್ತು ಫ್ರೆಶ್ ಮಾರ್ಟ್ ಬಳಿ ಶುಕ್ರವಾರ ಸಂಜೆ ಈ ದುಷ್ಕೃತ್ಯ ಸಂಭವಿಸಿದ್ದು, ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ.

ಹೊಟೇಲ್​ನಲ್ಲಿ ಸಮೋಸಾ ತಿನ್ನಲು ಬಂದಿದ್ದ ನಾಲ್ವರ ತಂಡ ಗಲಾಟೆ ಮಾಡಿ ದಾಂಧಲೆ ನಡೆಸಿದೆ. ಕಿಡಿಗೇಡಿಗಳು ಹೋಟೆಲ್​​ನ ಗಾಜು, ಪೀಠೋಪಕರಣವನ್ನು ಧ್ವಂಸ ಮಾಡಿದ್ದಾರೆ. ಈ ವೇಳೆ ದುಷ್ಕರ್ಮಿಗಳ ತಂಡವನ್ನು ಹಿಡಿಯಲು ಯತ್ನಿಸಿದ ಹೋಟೆಲ್​ ಸಿಬ್ಬಂದಿ ಮೇಲೆ ಎರಡು ಸುತ್ತು ಗುಂಡಿನ ದಾಳಿ ನಡೆಸಿದ್ದಾರೆ. ಹೋಟೆಲ್​ನ ಇಬ್ಬರು ಸಿಬ್ಬಂದಿ ಮೇಲೆ ಮಾರಣಾಂತಿಕ ಹಲ್ಲೆಯಾಗಿದೆ. ಈ ಪೈಕಿ ಓರ್ವ ಸಿಬ್ಬಂದಿಗೆ ಒಂದು ಗುಂಡು ತಗುಲಿ ಗಾಯವಾಗಿದೆ.

ಗುಂಡು ಹಾರಿಸಿ ಪರಾರಿಯಾಗಲೆತ್ನಿಸಿದ ನಾಲ್ವರ ಪೈಕಿ ಇಬ್ಬರನ್ನು ಸ್ಥಳೀಯರು ಹಿಡಿದಿದ್ದಾರೆ. ಮತ್ತಿಬ್ಬರು ಆಟೋ ಹತ್ತಿ ಸ್ಥಳದಿಂದ ತಪ್ಪಿಸಿಕೊಂಡಿದ್ದಾರೆ. ಹಳೇದ್ವೇಷದ ಹಿನ್ನೆಲೆ ಉದ್ದೇಶಪೂರ್ವಕವಾಗಿ ದಾಳಿ ಮಾಡಿರುವ ಶಂಕೆ ವ್ಯಕ್ತವಾಗಿದೆ. ಘಟನಾ ಸ್ಥಳಕ್ಕೆ ಪಾಂಡೇಶ್ವರ ಪೊಲೀಸರು ಆಗಮಿಸಿದ್ದು, ತನಿಖೆ ನಡೆಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net