ಶಿವಪುರ ಬಳಿ ಬಸ್ ಪಲ್ಟಿಯಾಗಿ 9 ಜನರಿಗೆ ಗಾಯ

Shivapura Bus Accident
ಶಿವಪುರ ಬಳಿ ಗುರುವಾರ ಸಂಜೆ ಬಸ್ ಪಲ್ಟಿಯಾಗಿರುವುದು.
Published on

ಬಳ್ಳಾರಿ: ತಾಲೂಕಿನ ಶಿವಪುರ ಬಳಿ ಗುರುವಾರ ಸಂಜೆ ಸರ್ಕಾರಿ ಬಸ್ ಪಲ್ಟಿಯಾಗಿ 9 ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಮೋಕಾ ಆಸ್ಪತ್ರೆಯಲ್ಲಿ ಏಳು ಜನ ಹಾಗೂ ವಿಮ್ಸ್ ಆಸ್ಪತ್ರೆಯಲ್ಲಿ ಇಬ್ಬರನ್ನು ದಾಖಲಿಸಲಾಗಿದೆ.

ಬಳ್ಳಾರಿಯಿಂದ ಹಡ್ಲಿಗಿಗೆ ತೆರಳುತ್ತಿದ್ದ ಕೆಕೆಆರ್‌ಟಿಸಿ ಬಸ್ ಚಾಲಕನ ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದೆ.

ಬಸ್‌ನಲ್ಲಿ 50ಕ್ಕೂ ಹೆಚ್ಚು ಜನ ಪ್ರಯಾಣಿಸುತ್ತಿದ್ದರು. ಸ್ಥಳಕ್ಕೆ ಮೋಕಾ ಠಾಣೆಯ ಪೊಲೀಸರು ಭೇಟಿ ಪರಿಶೀಲನೆ ನಡೆಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net