ನಿಡಗುಂದಿ ಗ್ರಾಮದ ಬಳಿ ಬಸ್ ಪಲ್ಟಿ

bus pulti
Published on

ನರೇಗಲ್ಲ: ಎಕ್ಸೆಲ್ ತುಂಡಾದ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿ ಕೆಎಸ್‌ಆರ್‌ಟಿಸಿ ಬಸ್ ಪಲ್ಟಿಯಾದ ಘಟನೆ ಸಮೀಪದ ನಿಡಗುಂದಿ ಗ್ರಾಮದ ಹತ್ತಿರ ಶುಕ್ರವಾರ ನಡೆದಿದೆ. ಪ್ರಯಾಣಿಕರು ಬಸ್‌ನ ಗಾಜು ಒಡೆದು ಹೊರ ಬಂದಿದ್ದಾರೆ.

ಗಜೇಂದ್ರಗಡ ಸಾರಿಗೆ ಘಟಕಕ್ಕೆ ಸೇರಿದ ಈ ಬಸ್ ಅರಸಿಕೆರೆಗೆ ತೆರಳುತ್ತಿತ್ತು. ಬಸ್ ಚಾಲಕನಿಗೆ ತಲೆಗೆ ಸ್ವಲ್ಪ ಪೆಟ್ಟು ಬಿದ್ದಿದ್ದು, ಕೆಲ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಆಸ್ಪತ್ರೆಗೆ ಸಾಗಿಸಲಾಯಿತು.

ಸ್ಥಳಕ್ಕಾಗಮಿಸಿದ ಸಾರಿಗೆ ಘಟಕದ ವ್ಯವಸ್ಥಾಪಕರನ್ನು ಪ್ರಯಾಣಿಕರು ತರಾಟೆಗೆ ತೆಗೆದುಕೊಂಡರು. ಗಜೇಂದ್ರಗಡ ಘಟಕದ ಬಸ್‌ಗಳು ಡಕೋಟದಂತಿದ್ದು, ರಿಪೇರಿ ಮಾಡದೇ ರಸ್ತೆಗೆ ಬಿಡುತ್ತಿರುವುದರಿಂದ ಪದೇ ಪದೆ ಇಂತಹ ಘಟನೆಗಳು ನಡೆಯುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net