ಶಿವಸಿಂಪಿ ಸಮಾಜದ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ

WEB Arji Ahawana
Published on

ಚಿತ್ರದುರ್ಗ: ಜಿಲ್ಲಾ ಲಿಂಗಾಯತ ಶಿವಶಿಂಪಿ ಸಮಾಜದಿಂದ ಕುಲಗುರು ಶಿವದಾಸಿಮಯ್ಯ ಜಯಂತಿ ಅಂಗವಾಗಿ ನಗರದಲ್ಲಿ ಆಗಸ್ಟ್ 6 ರಂದು ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಏರ್ಪಡಿಸಲಾಗಿದೆ.

ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಶೇ.85ಕ್ಕಿಂತ ಹೆಚ್ಚಿನ ಅಂಕಗಳೊಂದಿಗೆ ಉತ್ತೀರ್ಣರಾದ ಜಿಲ್ಲೆಯ ಹಾಗೂ ಶೇ.95ಕ್ಕಿಂತ ಹೆಚ್ಚಿನ ಅಂಕಗಳೊಂದಿಗೆ ಉತ್ತೀರ್ಣರಾದ ಹೊರ ಜಿಲ್ಲೆಗಳ ಸಮಾಜದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.

ಪುರಸ್ಕೃತರಿಗೆ ಬೆಳ್ಳಿ ಪದಕ ಮತ್ತು ಪ್ರಶಂಸನಾ ಪತ್ರವನ್ನು ನೀಡಿ ಗೌರವಿಸಲಾಗುವುದು. ಆಸಕ್ತರು ಅಗತ್ಯ ದಾಖಲೆಗಳೊಂದಿಗೆ ಇ.ಎಸ್.ಜಯದೇವಮೂರ್ತಿ, ಅಧ್ಯಕ್ಷರು, ಜಿಲ್ಲಾ ಲಿಂಗಾಯತ ಶಿವ ಸಿಂಪಿ ಸಮಾಜ, ಅನುಗ್ರಾಫಿಕ್ ಸೆಂಟರ್ ಧರ್ಮಶಾಲಾ ರಸ್ತೆ, ಐಯಣ್ಣನ ಪೇಟೆ, ಚಿತ್ರದುರ್ಗ. ಈ ವಿಳಾಸಕ್ಕೆ ಜು.25 ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net